ಉಪ್ಪಿನಂಗಡಿ: ಬಸ್‍ನಿಲ್ದಾಣ ಪ್ರವೇಶ ದ್ವಾರದ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಿರ್ಮಾಣವಾಗಿದ್ದ ಬೃಹತ್ ಹೊಂಡ- ಗುಂಡಿಗಳನ್ನು ಮುಚ್ಚುವ ಮೂಲಕ ಇದಕ್ಕೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಕಾರ್ಯ ಉಪ್ಪಿನಂಗಡಿ ಗ್ರಾ.ಪಂ.ನಿಂದಾಗಿದೆ.
ಇಲ್ಲಿನ ಬಸ್‍ನಿಲ್ದಾಣದ ಪ್ರವೇಶದ್ವಾರದಲ್ಲಿ ಡಾಮರು ಕಿತ್ತು ಹೋಗಿ ಬೃಹತ್ ಹೊಂಡ- ಗುಂಡಿಗಳು ನಿರ್ಮಾಣವಾಗಿತ್ತು. ಮಳೆಯ ನೀರು ನಿಂತು ಇಂದು ಕೆರೆಯಂತೆ ಭಾಸವಾಗುತ್ತಿತ್ತು. ಇದರಿಂದ ಬಸ್‍ಗಳ ಓಡಾಟಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿತ್ತು. ಈ ಜಾಗದ ಸ್ವಲ್ಪ ಭಾಗ ಲೋಕೋಪಯೋಗಿ ಇಲಾಖೆಗೆ ಸೇರಿದರೆ, ಇನ್ನು ಸ್ವಲ್ಪ ಭಾಗ ಉಪ್ಪಿನಂಗಡಿ ಗ್ರಾ.ಪಂ.ಗೆ ಸೇರಿತ್ತು. ಇಲ್ಲಿ ಬೃಹತ್ ಹೊಂಡ-ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಮಳೆಯ ಪ್ರಮಾಣ ಇಳಿಕೆಯಾದ ಕೂಡಲೇ ಉಪ್ಪಿನಂಗಡಿ ಗ್ರಾ.ಪಂ. ಜಲ್ಲಿ ಹುಡಿಯ ಮಿಶ್ರಣದಿಂದ ಹೊಂಡ-ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದೆ.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅಲ್ಲಿದ್ದು, ಕೆಲಸ ನಿರ್ವಹಣೆ ನೋಡಿಕೊಂಡರು.