ಉಪ್ಪಿನಂಗಡಿ: ಜ.11 ರಿಂದ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರತಿಭೋತ್ಸವ

Update: 2019-10-05 17:19 GMT

ಉಪ್ಪಿನಂಗಡಿ, ಅ.5: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರತಿಭೋತ್ಸವದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭೋತ್ಸವವು ಈ ಬಾರಿ ಜನವರಿ 11,12 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ.

ಜಿಲ್ಲಾ ವ್ಯಾಪ್ತಿಯ 11 ಡಿವಿಶನ್‌ಗಳಲ್ಲಿ ಜ. 5ಕ್ಕೆ ಪ್ರತಿಭೋತ್ಸವ ಮುಗಿಯಲಿದ್ದು, ಡಿವಿಶನ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ಸ್ಪರ್ಧಾಳು ಗಳಿಗೆ ಜಿಲ್ಲಾ ಮಟ್ಟದಲ್ಲಿ ಜ. 11, 12 ಪ್ರತಿಭೋತ್ಸವ ನಡೆಯಲಿದೆ.

ಜಿಲ್ಲಾ ಮಟ್ಟದಲ್ಲಿ ಪ್ರತಿಷ್ಠಿತ 11 ಡಿವಿಶನ್‌ಗಳು (ಮಂಗಳೂರು ಡಿವಿಶನ್, ಸುರತ್ಕಲ್ , ಉಳ್ಳಾಲ, ಮುಡಿಪು, ಮೂಡಬಿದ್ರೆ, ಬಂಟ್ವಾಳ , ವಿಟ್ಲ , ಬೆಳ್ತಂಗಡಿ , ಉಪ್ಪಿನಂಗಡಿ, ಪುತ್ತೂರು, ಸುಳ್ಯ ಡಿವಿಶನ್) ಸ್ಪರ್ಧಿಸಲಿದ್ದು, ಈ ಬಾರಿ ವಿಶಿಷ್ಟವಾದ ಹಲವಾರು ಸ್ಪರ್ಧೆಗಳು ನಡೆಯಲಿದೆ ಎಂದು ಜಿಲ್ಲಾ ಪ್ರತಿಭೋತ್ಸವ ಸ್ವಾಗತ ಸಮಿತಿ ಜನರಲ್ ಕನ್ವೀನರ್ ಕೆ‌.ಎಸ್.ದಾವೂದುಲ್ ಹಕೀಂ ಕಳಂಜಿಬೈಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News