ಹಿರಿಯ ಕಾಂಗ್ರೆಸ್ ಮುಖಂಡ ಹಿರಣ್ಯಾಕ್ಷ ಕೋಟ್ಯಾನ್ ನಿಧನ

Update: 2019-10-06 13:28 GMT

ಬಜ್ಪೆ : ಹಿರಿಯ ಕಾಂಗ್ರೆಸ್ ಹಾಗೂ  ಸಾಮಾಜಿಕ ಮುಂದಾಳು, ಹಾಲಿ ಪಂಚಾಯತ್ ಸದಸ್ಯ ಹಿರಣ್ಯಾಕ್ಷ ಕೋಟ್ಯಾನ್ (70)ಆಲ್ಪ ಕಾಲದ ಅನಾರೋಗ್ಯದಿಂದ ತಮ್ಮ ಸ್ವಗ್ರಹ ದಲ್ಲಿ ರವಿವಾರ ನಿಧನರಾಗಿದ್ದಾರೆ.

ಕರಿಯಣ್ಣ ಎಂದೇ ಜನಾನುರಾಗಿಯಾಗಿದ್ದ ಅವರು ಕಳೆದ 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು 2 ಬಾರಿ ಹಿಂದಿನ ಮಂಡಲ ಪಂಚಾಯತ್ ಸದಸ್ಯರಾಗಿ ನಂತರ ಕುಪ್ಪೆಪದವು ಪಂಚಾಯತ್ ಅಧ್ಯಕ್ಷರಾಗಿದ್ದರು.

ಕುಪ್ಪೆಪದವು ಗ್ರಾಮ ಪಂ. ಹಾಲಿ ಸದಸ್ಯರಾಗಿದ್ದ ಅವರು ಇಲ್ಲಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು. 

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News