ಮರ ಕಡಿಯುವುದು ಅನಿವಾರ್ಯ: ಮುಂಬೈ ಮೆಟ್ರೋ ಎಂಡಿ ಪ್ರತಿಕ್ರಿಯೆ
Update: 2019-10-06 20:34 IST
ಮುಂಬೈ, ಅ.6: ಮೆಟ್ರೋ ಕಾಮಗಾರಿಗೆ ಆರೆ ಕಾಲೊನಿಯಲ್ಲಿ 2500ಕ್ಕೂ ಹೆಚ್ಚು ಮರಗಳನ್ನು ಕಡಿಯುತ್ತಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಮೆಟ್ರೋ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ, ಇದು ಅನಿವಾರ್ಯ ಕ್ರಮವಾಗಿತ್ತು ಎಂದಿದ್ದಾರೆ.
ಹೊಸದನ್ನು ನಿರ್ಮಾಣ ಮಾಡುವಾಗ ಕೆಲವೊಮ್ಮೆ ಇಂತಹ ಕಾರ್ಯ ನಡೆಸಬೇಕಾಗುತ್ತದೆ. ಹೊಸ ನಿರ್ಮಾಣವು ಹೊಸ ಬದುಕು ಮತ್ತು ಹೊಸ ಸೃಷ್ಟಿಗೆ ಪೂರಕವಾಗಿದ್ದರೆ ಆಗ ವಿನಾಶ ಕಾರ್ಯ ಅನಿವಾರ್ಯವಾಗಿರುತ್ತದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ ಆರೆ ಕಾಲೊನಿಯಲ್ಲಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದ್ದು ಹಿಂದಿ ಸಿನೆಮ ರಂಗದ ಹಲವು ನಟರೂ ಮರ ಕಡಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.