ನಾಟೆಕಲ್: ಆತ್ಮಶಕ್ತಿ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ

Update: 2019-10-06 15:31 GMT

ಕೊಣಾಜೆ:  ಅತ್ಯಂತ ಕಡಿಮೆ ಅವಧಿಯಲ್ಲಿ  17 ನೇ ಶಾಖೆ ತೆರೆಯುವ ಮೂಲಕ ಕ್ರಾಂತಿ ಮಾಡಿರುವ ಆತ್ಮಶಕ್ತಿ ಸಹಕಾರಿ ಸಂಘವು  ಸಹಕಾರಿ ರಂಗಕ್ಕೆ ಬಹಳ ದೊಡ್ಡ ಕೊಡುಗೆ. ನೂತನ‌ ಶಾಖೆ  ಅದ್ಭುತ ಪ್ರಗತಿ ಸಾಧಿಸಲಿ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ನಾಟೆಕಲ್ ನ ನಾಟೆಕಲ್ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರ ಉದ್ಘಾಟನೆಗೊಂಡ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 17ನೇ ನಾಟೆಕಲ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ  ವಿಶ್ವಾಸವೇ ದೊಡ್ಡದು. ಆತ್ಮಶಕ್ತಿ ಸಹಕಾರಿ  ಕಡಿಮೆ ಅವಧಿಯಲ್ಲಿ  ಹೆಚ್ಚಿನ‌ ಶಾಖೆ ತೆರೆಯುವ ಮೂಲಕ ರಾಜ್ಯ, ರಾಷ್ಟ್ರಪ್ರಶಸ್ತಿಗೆ ಮುಂದಿನ ದಿನಗಳಲ್ಲಿ  ಪಾತ್ರವಾಗಲಿದೆ. ಯಾಕೆಂದರೆ ಸಂಘ ಹಣಕಾಸು ವ್ಯವಹಾರ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಯನ್ನು ಪ್ರದರ್ಶಿಸುತ್ತಿದ್ದು ಆ ದಿಸೆಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಗಳು ಪರಸ್ಪರ ಅನ್ಯೋನ್ಯತೆಯಿಂದ ವ್ಯವಹರಿಸಿ ಸಂಘದ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ನಮ್ಮ ಸಂಘದ ನೂತನ ಶಾಖೆಗಳು ರಾಷ್ಟ್ರೀಕೃತ ಬ್ಯಾಂಕಿನಂತೆ ಹವಾನಿಯಂತ್ರಿತ ವ್ಯವಸ್ಥೆ, ವಿದೇಶಕ್ಕೆ ಹಣ ಕಳುಹಿಸಲು, ವಿದೇಶದಿಂದ ಕಳುಹಿಸುವ, ಹತ್ತು ಸಾವಿರ ರೂ. ಸಾಲ ಕೇವಲ‌ ಐದು ನಿಮಿಷದಲ್ಲಿ, ಚಿನ್ನಾಭರಣ ಈಡಿನ‌ ಸಾಲ ತಿಂಗಳಿಗೆ ಕೇವಲ ಒಂದು ರೂ. ಕನಿಷ್ಟ ಬಡ್ಡಿಯಲ್ಲಿ ಗ್ರಾಂಗೆ ಗರಿಷ್ಠ  2800ರೂ. ಕೊಡುವ ಹಾಗೂ ವರ್ತಕರಿಗೆ ಸಹಾಯವಾಗುವಂತಹ ಸಾಲ ಸೌಲಭ್ಯ ನೀಡಲಿದ್ದೇವೆ ಎಂದು‌ ನುಡಿದರು.

ಕೊಲ್ಯ ಬಿಲ್ಲವ ಸೇವಾ ಸಮಾಜದ ಗೌರವಾಧ್ಯಕ್ಷ ಡಾ. ರಾಮಾನುಜಂ ಕಾರ್ಯಕ್ರಮ ಉದ್ಘಾಟಿಸಿದರು.  ಜಿಲ್ಲಾ ಪಂ. ಮಾಜಿ ಸದಸ್ಯ ಎನ್. ಎಸ್. ಕರೀಂ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ‌ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಿನ್ಯ ಬೆಳರಿಂಗೆ ಭಂಡಾರಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶ್ರೀಶಾಸ್ತಾ ಕಿನ್ಯ ಭದ್ರತಾ ಕೊಠಡಿ ಉದ್ಘಾಟಿಸಿದರು.

ತಾಲೂಕು ಪಂ. ಸದಸ್ಯೆ ಸುರೇಖ ಚಂದ್ರಹಾಸ್, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ಸದಸ್ಯ ಅಬ್ಬಾಸ್, ಸದಸ್ಯೆ ಪ್ರೇಮ, ಪಿಡಿಒ ಮಂಜಪ್ಪ ಎಚ್. ಎಚ್ ಹಾಗೂ ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ವಾಮನ ಕೆ., ಕೆ. ಸದಾನಂದ ಡಿ.ಎಸ್, ರಾಮ್ ದಾಸ್ ಮರೋಳಿ, ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸುರೇಶ್ ವಿ. ಪೂಜಾರಿ, ರಮನಾಥ ಸನಿಲ್,  ಸುಜಯ ಹೇಮಚಂದ್ರ, ಕುಶಾಲಾಕ್ಷಿ ಯಶವಂತ್, ಶಾಖಾ ಪ್ರಬಂಧಕಿ ಪೂಜಾ, ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ನೇಮಿರಾಜ್ ಸ್ವಾಗತಿಸಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪೂಜಾ ವಿಜಯ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News