×
Ad

ಯುಎಇ ಪ್ರತಿಭೋತ್ಸವಕ್ಕೆ ಕೂರತ್ ತಂಙಳ್ ಚಾಲನೆ

Update: 2019-10-06 21:33 IST

ಮಂಗಳೂರು: ಕರ್ನಾಟಕ್ ಕಲ್ಚರಲ್ ಫೌಂಡೇಶನ್ ಯು ಎ ಇ  ರಾಷ್ಟ್ರೀಯ ಸಮಿತಿ ಪ್ರತೀ ವರ್ಷ ನಡೆಸುತ್ತಿರುವ ಪ್ರತಿಭೆಗಳ ಸಾಂಸ್ಕೃತಿಕ  ಹಬ್ಬ

'ಪ್ರತಿಭೋತ್ಸವ 2020'ಗೆ ಚಾಲನೆ ನೀಡಲಾಯಿತು.

"ಅರಿವಿನ ಕ್ರಾಂತಿಗೆ ಪ್ರತಿಭೆಗಳ ನಡಿಗೆ"  ಪ್ರತಿಭೋತ್ಸವದ ಲಾಂಛನವನ್ನು ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್  ಬಿಡುಗಡೆ ಮಾಡಿದರು.  ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸ್ಪರ್ಧೆಯ ವಿಜೇತ ಸ್ಪರ್ಧಾರ್ಥಿಗಳ ಗ್ರಾಂಡ್ ಫೈನಲ್ ಕಾರ್ಯಕ್ರಮ  2020ರ ಜ. 3ರಂದು ಅಬುಧಾಬಿಯ ಸುಸಜ್ಜಿತ  ಸಭಾಂಗಣಧಲ್ಲಿ ನಡೆಯಲಿದೆ. 50ಕ್ಕೂ ಹೆಚ್ಚು ಸ್ಪರ್ಧಾ ವಿಷಯಗಳಲ್ಲಿ 1000ಕ್ಕೂ ಮಿಕ್ಕ ಪ್ರತಿಭೆಗಳು ಸ್ಪರ್ಧಿಸಲಿದ್ಧಾರೆ. ಪ್ರತಿ ಎಮಿರೇಟ್ಸ್ ನಲ್ಲಿ
 ಕೆಸಿಎಫ್  ಝೋನಲ್ ಮಟ್ಟದ ಸ್ಪರ್ದೆಗೆ ಈಗಾಗಲೇ ನೋಂದಾವಣಿ ಆರಂಭವಾಗಿದೆ. ಸಬ್ ಜೂನಿಯರ್, ಜೂನಿಯರ್ , ಸೀನಿಯರ್ ಬಾಯ್ಸ್, ಸೀನಿಯರ್ ಗರ್ಲ್ಸ್, ಜನರಲ್ ಮೇಲ್, ಜನರಲ್ ಫೀಮೇಲ್  ವಿಭಾಗಗಳಲ್ಲಿ ಕಿರಾತ್ , ಹಾಡು ,ಭಾಷಣ ,ರಸ ಪ್ರಶ್ನೆ ಮೆಮೊರಿ ಟೆಸ್ಟ್ , ಕಸದಿಂದ ರಸ , ಚರಿತ್ರೆ ಬರಹ , ಅರೇಬಿಕ್ ಕ್ಯಾಲಿಗ್ರಫಿ ,ಬುರ್ದಾ ,ದಫ್ಫ್ ,ಪ್ರಬಂಧ ,ಇತ್ಯಾಧಿ ಸ್ಪರ್ಧೆಗಳು ನಡೆಯಲಿದ್ದು ಯುಎಇ ಯಾದ್ಯಂತ ನೆಲೆಸಿರುವ ಕನ್ನಡಿಗರಲ್ಲಿ ನೋಂದಾಯಿಸಲು ಸಂಘಟಕರು ತಿಳಿಸಿದ್ದಾರೆ.

ಪ್ರತಿಭೋತ್ಸವ ಸಮಿತಿ ಸಂಚಾಲಕರಾದ ಬ್ರೈಟ್ ಮಾರ್ಬಲ್ ಇಬ್ರಾಹಿಂ ,ಕನ್ವಿನರ್ ಇಕ್ಬಾಲ್ ಕಾಜೂರ್ , ಡಾ. ಶೇಕ್ ಬಾವ , ಪಿ ಎಂ ಎಚ್ ಹಮೀದ್, ಹಮೀದ್ ಸಅದಿ, ಹಸೈನಾರ್ ಅಮಾನಿ , ಹಕೀಮ್ ತುರ್ಕಳಿಕೆ ಉಪಸ್ಥಿತರಿದ್ದರು . ಹೆಚ್ಚಿನ ಮಾಹಿತಿಗಾಗಿ  +971 55 768 7004 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News