ಮಹಾರಾಷ್ಟ್ರ: ಸೆಸ್ನಾ ವಿಮಾನ ಪತನ, ಭಾರೀ ಹಾನಿ, ತನಿಖೆಗೆ ಆದೇಶ
Update: 2019-10-06 21:39 IST
ಹೊಸದಿಲ್ಲಿ,ಅ.6: ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರ್ಪುರದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರವೊಂದರ ವಿಮಾನವು ಪತನಗೊಂಡಿದ್ದು, ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ವಿದ್ಯಾರ್ಥಿ ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನಾದರೂ,ಎನ್‌ಎಂಐಎಂಎಸ್ ಅಕಾಡೆಮಿ ಆಫ್ ಏವಿಯೇಷನ್‌ಗೆ ಸೇರಿದ ಸೆಸ್ನಾ 172 ಆರ್ ವಿಮಾನಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ಈ ವಿಮಾನವು ತರಬೇತಿ ಹಾರಾಟವನ್ನು ಆರಂಭಿಸಿತ್ತು. 56 ನಿಮಿಷಗಳ ಹಾರಾಟದ ಬಳಿಕ ಅಕಾಡಮಿಯ ಕ್ಯಾಂಪಸ್‌ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ವಿಮಾನವು ಪತನಗೊಂಡಿತ್ತು. ವಿದ್ಯಾರ್ಥಿ ಪೈಲಟ್‌ಗೆ ಶಿರ್ಪುರ್‌ದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಧುಳೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದರು.