×
Ad

‘ಈ ಅಪ್ಪುಗೆ ಬಹು ಸಮಯದಿಂದ ಬಾಕಿಯಿತ್ತು’: ಬಾಂಗ್ಲಾದೇಶ ಪ್ರಧಾನಿಯೊಂದಿಗೆ ಭೇಟಿ ಬಳಿಕ ಪ್ರಿಯಾಂಕಾ ಗಾಂಧಿ

Update: 2019-10-06 21:45 IST

ಹೊಸದಿಲ್ಲಿ, ಅ.6: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು ರವಿವಾರ ಇಲ್ಲಿ ಭೇಟಿಯಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಅವರು ತನ್ನನ್ನು ಆತ್ಮೀಯವಾಗಿ ಅಪ್ಪಿಕೊಂಡಿದ್ದು, ಈ ಅಪ್ಪುಗೆ ಬಹುಸಮಯದಿಂದ ಬಾಕಿಯಿತ್ತು ಎಂದು ಟ್ವೀಟಿಸಿದ್ದಾರೆ.

‘ಶೇಖ್ ಹಸೀನಾಜಿ ಅವರನ್ನು ಮತ್ತೊಮ್ಮೆ ಭೇಟಿಯಾಗಲು ನಾನು ಸುದೀರ್ಘ ಸಮಯದಿಂದ ಕಾಯುತ್ತಿದ್ದೆ. ವೈಯಕ್ತಿಕ ನೋವುಗಳನ್ನು ಮೆಟ್ಟಿನಿಂತು ತನ್ನ ನಂಬಿಕೆಗಳಿಗಾಗಿ ಹೋರಾಡುತ್ತಿರುವ ಅವರ ಆತ್ಮಬಲವು ನನಗೆ ಸದಾ ಹೆಚ್ಚಿನ ಸ್ಫೂರ್ತಿಯನ್ನು ನೀಡಲಿದೆ ’ ಎಂದು ಪ್ರಿಯಾಂಕಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತನ್ನ ಭಾರತ ಭೇಟಿಯ ಕೊನೆಯ ದಿನವಾದ ರವಿವಾರ ಶೇಖ್ ಹಸೀನಾ ಅವರು ಸೋನಿಯಾ ಗಾಂಧಿ,ಮನಮೋಹನ ಸಿಂಗ್ ಮತ್ತು ಆನಂದ ಶರ್ಮಾ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಭಾರತ-ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News