ತೆಕ್ಕಟ್ಟೆ: ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾದ ಚಿರತೆ

Update: 2019-10-06 16:28 GMT

ಕುಂದಾಪುರ, ಅ.6: ತೆಕ್ಕಟ್ಟೆ ಗ್ರಾಮದ ಮಾಲಾಡಿ ಎಂಬಲ್ಲಿರುವ ಹಾಡಿಯಲ್ಲಿ ಒಂದು ತಿಂಗಳ ಹಿಂದೆ ಇರಿಸಲಾದ ಅರಣ್ಯ ಇಲಾಖೆಯ ಬೋನಿಗೆ ಅ.5 ರಂದು ರಾತ್ರಿ ವೇಳೆ ಚಿರತೆಯೊಂದು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಚಿರತೆ ಸೆರೆ ಹಿಡಿಯಲು ಇಟ್ಟ ಬೋನಿಗೆ ಶನಿವಾರ ತಡರಾತ್ರಿ ಸುಮಾರು 10 ವರ್ಷ ಪ್ರಾಯದ ಗಂಡು ಚಿರತೆ ಬಿದ್ದಿದ್ದು ಅರಣ್ಯ ಇಲಾಖೆಯವರು ರವಿವಾರ ಸೆರೆ ಹಿಡಿದಿದ್ದಾರೆ.

ಒಂದು ತಿಂಗಳ ಹಿಂದೆ ಮಾಲಾಡಿ ಪರಿಸರದಲ್ಲಿ ಚಿರತೆಯನ್ನು ನೋಡಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆಯವರು ಮಾಲಾಡಿಯ ತೋಳಾರ್ ಎಂಬವರ ಹಾಡಿಯಲ್ಲಿ ಚಿರತೆಯನ್ನು ಸೆರೆ ಹಿಡಿ ಯಲು ನಾಯಿ ಸಹಿತ ಬೋನು ಇಟ್ಟಿದ್ದರು.

ಆಹಾರ ಅರಸುತ್ತ ಬಂದ ಚಿರತೆ ನಾಯಿಯನ್ನು ತಿನ್ನಲು ಬಂದಾಗ ಬೋನಿ ನೊಳಗೆ ಸೆರೆಯಾಯಿತೆನ್ನಲಾಗಿದೆ. ಈ ವಿಚಾರ ರವಿವಾರ ಬೆಳಗಿನ ಜಾವ ಸ್ಥಳೀಯರ ಗಮನಕ್ಕೆ ಬಂದಿದ್ದು, ಕುಂದಾಪುರ ವಲಯ ಅರಣ್ಯ ಇಲಾಖೆಯ ವರು ಬೆಳಗ್ಗೆ 8ಗಂಟೆಗೆ ಸ್ಥಳಕ್ಕೆ ಆಗಮಿಸಿದರು. ಬಳಿಕ ಬೋನು ಸಮೇತ ಚಿರತೆ ಯನ್ನು ಕುಂದಾಪುರ ಪಶು ವೈದ್ಯಾಧಿಕಾರಿಗಳಲ್ಲಿ ಪರೀಕ್ಷಿಸಿ, ನಂತರ ಕೊಲ್ಲೂರು ಅಭಯಾರಣ್ಯದಲ್ಲಿ ಚಿರತೆಯನ್ನು ಬಿಡಲಾಯಿತು.

ಸುಮಾರು ಹತ್ತು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಸೆರೆಯಾದ ಚಿರತೆಯನ್ನು ನೋಡಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಚಿರತೆಯ ಹಣೆಯಲ್ಲಿ ಗಾಯ ಕಂಡುಬಂದಿದ್ದು, ಇದು ಹಳೆಯ ಗಾಯ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕುಂದಾಪುರ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿ ಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ, ಸಿಬ್ಬಂದಿ ಗಳಾದ ಮಾಲತಿ, ಮಂಜು, ಅರಣ್ಯ ವೀಕ್ಷಕ ಸೋಮಶೇಖರ್, ಚಾಲಕ ಅಶೆಕ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News