×
Ad

ಪಬ್‌ನಲ್ಲಿ ಕಿರುಕುಳ: ಯುವಕನ ಸೆರೆ

Update: 2019-10-06 22:10 IST

ಮಂಗಳೂರು, ಅ.6: ನಗರದ ಎಂಜಿ ರಸ್ತೆಯಲ್ಲಿರುವ ಪಬ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಗ್ರಾಹಕರಿಗೆ ಕಿರುಕುಳ ಮಾಡಿದ ಆರೋಪದಡಿ ಯುವಕನೊಬ್ಬನನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಾರ ನಿವಾಸಿ ಗೌರೀಶ್ (28) ಬಂಧಿತ ಆರೋಪಿ.

ಶನಿವಾರ ರಾತ್ರಿ ಪಬ್‌ಗೆ ಹೋದ ಈತ ಕುಡಿದ ಮತ್ತಿನಲ್ಲಿ ಇತರ ಗ್ರಾಹಕರಿಗೆ ಕಿರುಕುಳ ಮಾಡಿದ್ದಾನೆ ಎನ್ನಲಾಗಿದೆ, ಅಲ್ಲದೆ ಪಬ್‌ನ ಕೆಳಗಡೆ ಬಂದು ಯುವಕ ಹಾಗೂ ಇತರರ ಜೊತೆ ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಪರಸ್ಪರ ವಾಗ್ವಾದ ನಡೆದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು.

ಈತ ಖಾಸಗಿ ಸಂಸ್ಥೆಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದ್ದು, ಬರ್ಕೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News