ಮಂಗಳೂರಿನ ಖ್ಯಾತ ವೈದ್ಯ ಡಾ. ಉಸ್ಮಾನ್ ನಿಧನ
Update: 2019-10-07 12:03 IST
ಮಂಗಳೂರು, ಅ.7: ನಗರದ ಖ್ಯಾತ ವೈದ್ಯ ಡಾ. ಪಿ.ಕೆ. ಉಸ್ಮಾನ್ (81) ಅವರು ಸೋಮವಾರ ಆಸ್ಟ್ರೇಲಿಯಾದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅವರು ಅನಾರೋಗ್ಯದಿಂದಿದ್ದರು.
ಮೂರು ವಾರದ ಹಿಂದೆ ಆಸ್ಟ್ರೇಲಿಯಾದಲ್ಲಿರುವ ತನ್ನಿಬ್ಬರು ಪುತ್ರಿಯರ ಮನೆಗೆ ತೆರಳಿದ್ದ ಅವರು ಆರೋಗ್ಯ ಹದಗೆಟ್ಟ ಪರಿಣಾಮ ಕೊನೆಯುಸಿರೆಳೆದಿದ್ದಾರೆ. ಮೂಲತಃ ಬೈಕಂಪಾಡಿ ಸಮೀಪದ ಕುಕ್ಕಾಡಿ ನಿವಾಸಿಯಾಗಿದ್ದ ಡಾ. ಪಿ.ಕೆ. ಉಸ್ಮಾನ್ ಮಂಗಳೂರಿನಲ್ಲಿ ಮೂಳೆಚಿಕಿತ್ಸೆಯ ಖ್ಯಾತ ವೈದ್ಯರಾಗಿ ಗುರುತಿಸಲ್ಪಟ್ಟಿದ್ದರು.
ನಗರದ ಇಂದಿರಾ ಆಸ್ಪತ್ರೆಯ ನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮೃತರು ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.