ರಕ್ತದಾನ ಮಾಡಿ, ಸೌಹಾರ್ದತೆಯಿಂದ ಬಾಳಿ: ಬೆಳ್ಳಾರೆಯಲ್ಲಿ ಸುದಾಕರ ರೈ

Update: 2019-10-07 10:36 GMT

ಬೆಳ್ಳಾರೆ: ಸುನ್ನೀ ಸೌಹಾರ್ದ ವೇಧಿಕೆ ಬೆಳ್ಳಾರೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇವರ ಸಹಯೋಗದಲ್ಲಿ ಮರ್ಹೂಂ ಸಂಶುದ್ದೀನ್ ಸ್ಮರಣಾರ್ಥ ಬೆಳ್ಳಾರೆ ದೇವಿ ಹೈಟ್ಸ್ ಹೊರಾಂಗಣದಲ್ಲಿ  ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನಿ ಸೌಹಾರ್ದ ವೇದಿಕೆಯ ಅಧ್ಯಕ್ಷ ಹಸೈನಾರ್ ಹಾಜಿ ವಹಿಸಿದ್ದು,  ಹಸ್ಸನ್ ಸಖಾಫಿ ದುಃವಾ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಲವಾರು ಬಾರಿ ರಕ್ತದಾನ ಮಾಡಿದ ರಕ್ತದಾನಿ  ಸುಧಾಕರ ರೈ ಅವರು ಮಾತನಾಡಿ ನಾಡಿನಲ್ಲಿ ಸಂಘ ಸಂಸ್ಥೆಗಳು ಜನಪರ ಕಾಳಜಿಯ ರಕ್ತದಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಐಖ್ಯತೆ ಸಾಧ್ಯ ಎಂದ ಅವರು ರಕ್ತದಾನ ಮತ್ತು ಅನ್ನದಾನಕ್ಕಿಂತ ಮಹಾದಾನ ಬೇರೊಂದಿಲ್ಲ, ಆತ್ಮೀಯ ಗೆಳೆಯ ಸಂಶುದ್ದೀನ್ ರವರು  ನಮ್ನನ್ನು ಅಗಲಿ ಏಳು ವರ್ಷ ಸಂದಿವೆ ಆದರೂ ಅವರ ನೆನಪು ಮಾತ್ರ ಸದಾ ಅಮರವಾಗಿದೆ ಎಂದರು.  ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ, ಜಮಾಅತ್ ಅಧ್ಯಕ್ಷ ಕೆ.ಎಂ ಮಹಮ್ಮದ್ ಹಾಜಿ, ಮರ್ಹೂಂ ಸಂಶುದ್ದೀನ್ ರವರ ಸಹೋದರ ಅಬ್ದುಲ್ ರಝಾಕ್, ಸುನ್ನೀ ಸೌಹಾರ್ದ ವೇದಿಕೆ ಉಪಾಧ್ಯಕ್ಷ ಹಮೀದ್ ಆಲ್ಫಾ , ಬೆಳ್ಳಾರೆಯ ಪೋಲಿಸ್ ಠಾಣಾಧಿಕಾರಿ ಡಿ.ಎನ್. ಈರಯ್ಯ,  ಡಾ.ತಿಲಕ್, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ನವೀನ್ ರೈ ತಂಬಿನಮಕ್ಕಿ, ಆರೀಫ್ ಬೆಳ್ಳಾರೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ 74 ಮಂದಿ ರಕ್ತದಾನಗೈದರು.

ಸಮಿತಿಯ ಸದಸ್ಯರಾದ ಬಶೀರ್ ಕೆ.ಎ ಸ್ವಾಗತಿಸಿ, ಕಾರ್ಯದರ್ಶಿ ಜಲೀಲ್ ಎ.ಆರ್ ವಂದಿಸಿದರು. ಇಕ್ಬಾಲ್ ಪಾಲ್ತಾಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News