ಎಚ್.ಶ್ರೀಧರ ಹಂದೆಗೆ ‘ಕಾರಂತ ಪ್ರಶಸ್ತಿ’
Update: 2019-10-07 17:36 IST
ಮಂಗಳೂರು, ಅ.7: ಮಕ್ಕಳ ಯಕ್ಷಗಾನ ತಂಡವನ್ನು ಮೊತ್ತ ಮೊದಲು ಸಾಕಾರಗೊಳಿಸಿದ ಹಿರಿಯ ಯಕ್ಷಗುರು ಹಾಗೂ 1991ರಲ್ಲಿ ಉತ್ತಮ ಶಿಕ್ಷಕರಿಗಾಗಿ ನೀಡುವ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದ ಎಚ್. ಶ್ರೀಧರ ಹಂದೆ ‘ಕಾರಂತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ದ.ಕ. ಜಿಲ್ಲಾ ಕಸಾಪ ಹಾಗೂ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಅ.10ರಂದು ಸಂಜೆ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಜರುಗಲಿರುವ ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದೆಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.