ಎನ್.ಡಬ್ಲ್ಯೂ.ಎಫ್ ವತಿಯಿಂದ 'ನಮ್ಮ ಬದುಕು ನಮ್ಮ ಹೆಮ್ಮೆ' ಅಭಿಯಾನ ಉದ್ಘಾಟನೆ
ಮಂಗಳೂರು : ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ವತಿಯಿಂದ 'ನಮ್ಮ ಬದುಕು ನಮ್ಮ ಹೆಮ್ಮೆ' ಅಭಿಯಾನದ ಉದ್ಘಾಟನಾ ಸಮಾರಂಭವು ಮಂಗಳೂರು ಕಣ್ಣೂರಿನ ಬಳ್ಳೂರು ಗುಡ್ಡೆಯಲ್ಲಿ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ ಡಬ್ಲ್ಯು ಎಫ್ ಮಂಗಳೂರು ವಲಯ ಕಾರ್ಯದರ್ಶಿ ಮಿಶ್ರಿಯಾ ಹನೀಫ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಷನಲ್ ವಿಮೆನ್ಸ್ ಫ್ರಂಟ್ ನ ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ಎ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪ್ರೀತಿ ಪ್ರೇಮದ ಹೆಸರಲ್ಲಿ ಮೈಮರೆಯುವ ಹಾಗೂ ಗಾಂಜಾದಂತಹ ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾಗಿ ತಮ್ಮ ಅಮೂಲ್ಯ ಜೀವನವನ್ನು ಸ್ವಯಂ ನಾಶಗೊಳಿಸುತ್ತಿರುವ ಯುವ ಸಮೂಹಕ್ಕೆ ಹಾಗೂ ಇದರ ಕುರಿತು ಪೋಷಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್ '' ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಮೆನ್ಸ್ ಇಂಡಿಯಾ ಮೂವ್ ಮೆಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ ಯುವ ಸಮೂಹ ಅನಾಚಾರ ಅರಾಜಕತೆಯ ದಾಸರಾದರೆ ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ ಬದಲಾಗಿ ಒಂದು ಕುಟುಂಬ ಸಮಾಜ ಹೀಗೆ ದೇಶದ ಮೇಲೆ ಇದು ಪ್ರಭಾವ ಬೀರಲಿದೆ ಆದುದರಿಂದ ಇಂತಹ ದುಶ್ಚಟಗಳ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಹೇಳಿದರು.
ಶಹನಾಝ್ ಬೋಲಾರ್ ಸ್ವಾಗತಿಸಿ, ಶಹನಾಝ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿ, ಸಮ್ರೀನ ಸಿದ್ದೀಕ್ ವಂದಿಸಿದರು.