ಉದ್ಯಮಿ ಚಂದ್ರಶೇಖರ ಅಡಿಗ ನಿಧನ

Update: 2019-10-07 13:41 GMT

ಭಟ್ಕಳ: ನಗರದ ಹೋಟೆಲ್ ಉದ್ಯಮಿ, ಯಕ್ಷಗಾನ ಪ್ರೇಮಿ ಬಾರಕೂರು ಚಂದ್ರಶೇಖರ ಅಡಿಗ (77) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರಾಗಿದ್ದು ಬಾರಕೂರು ಸಂಸ್ಥಾನದ ಬನ್ನಿ ಮಹಾಕಾಳಿ ದೇವಸ್ಥಾನ (ಸಿಂಹಾಸನಗುಡ್ಡೆ) ದೇವಸ್ಥಾನದ ಮುಕ್ತೇಸರರಲ್ಲಿ ಒಬ್ಬರಾಗಿದ್ದರು.  ಸುಮಾರು 1970ರ ದಶಕದಲ್ಲಿ ಭಟ್ಕಳಕ್ಕೆ ಬಂದು ಹೋಟೆಲ್ ಉಧ್ಯಮವನ್ನು ಆರಂಭಿಸಿದರು. ಅವರು ಮಹಾಲಕ್ಷ್ಮೀ ಭಟ್ಟರೆಂದೇ ಚಿರ ಪರಿಚಿತರು.

ಇವರು ಕಮಲಶಿಲೆ ಮೇಳದಲ್ಲಿ ಕಾಲಮಿತಿಯೊಳಗಿನ ಯಕ್ಷಗಾನವನ್ನು ಆರಂಭಿಸಿದವರಾಗಿದ್ದಾರೆ. ಭಟ್ಕಳದಲ್ಲಿ ಅನೇಕ ವರ್ಷಗಳ ಕಾಲ ಯಕ್ಷಗಾನವನ್ನು ಆಡಿಸುತ್ತಿದ್ದ ಇವರು ನಾಟಕ ಪ್ರದರ್ಶನಗಳನ್ನು ಕೂಡಾ ಮಾಡಿಸುತ್ತಾ ಕಲಾ ಪೋಷಕರಾಗಿದ್ದರು. 

ಕಳೆದ ಕೆಲವು ವರ್ಷಗಳಿಂದ ಹೋಟೆಲ್ ಉದ್ಯಮದಿಂದ ದೂರ ಉಳಿದರೂ ಸಹ ಇವರ ಪುತ್ರ ಇಂದಿಗೂ ಹೋಟೆಲ್ ಉದ್ಯಮ ನಡೆಸಿಕೊಂಡು ಬಂದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News