40 ವರ್ಷಕ್ಕಿಂತ ಕೆಳಗಿನ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರು

Update: 2019-10-08 18:23 GMT

ನ್ಯೂಯಾರ್ಕ್, ಅ. 8: ಅಮೆರಿಕದ ‘ಫಾರ್ಚುನ್’ ಮ್ಯಾಗಝಿನ್ ಸಿದ್ಧಪಡಿಸಿರುವ 40 ವರ್ಷಕ್ಕಿಂತ ಕೆಳಗಿನ ಅತ್ಯಂತ ಪ್ರಭಾವಿ ಹಾಗೂ ಸ್ಫೂರ್ತಿದಾಯಕ 40 ಉದ್ಯಮಿಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ.

ಅಮೆರಿಕದ ಇಂಟೆಲ್ ಕಂಪೆನಿಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫೀಶಲ್ ಇಂಟಲಿಜೆನ್ಸ್- ಎಐ) ಸಾಫ್ಟ್‌ವೇರ್ ಮತ್ತು ಎಐ ಪ್ರಯೋಗಾಲಯದ ಉಪಾಧ್ಯಕ್ಷ 35 ವರ್ಷದ ಅರ್ಜುನ್ ಬನ್ಸಾಲ್ ಮತ್ತು ಫ್ಯಾಶನ್ ಕಂಪೆನಿ ಝಿಲಿಂಗೊದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹ ಸ್ಥಾಪಕಿ 27 ವರ್ಷದ ಅಂಕಿತಿ ಬೋಸ್ 2019ರ ‘40 ಅಂಡರ್ 40’ ಪಟ್ಟಿಯಲ್ಲಿ ಸ್ಥಾನ ಪಡೆದವರು.

ಬನ್ಸಾಲ್‌ರ ತಂಡದ ಸುಮಾರು 100 ಮಂದಿ ಅಮೆರಿಕ, ಇಸ್ರೇಲ್ ಮತ್ತು ಪೋಲ್ಯಾಂಡ್‌ಗಳಲ್ಲಿ ಹರಡಿಕೊಂಡು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಅಂಕಿತಿ ಬೋಸ್ ಬ್ಯಾಂಕಾಕ್‌ನ ಚಟುಚಕ್ ಮಾರುಕಟ್ಟೆಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಿಗಳಿಗೆ ತಮ್ಮ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸುಲಭ ವಿಧಾನವಿಲ್ಲ ಎಂಬುದನ್ನು ಮನಗಂಡರು ಹಾಗೂ ಬಳಿಕ, ನಾಲ್ಕು ವರ್ಷಗಳ ಹಿಂದೆ ಸಿಂಗಾಪುರದಲ್ಲಿ ಮಾರುಕಟ್ಟೆ ಕಂಪೆನಿಯೊಂದನ್ನು ಸ್ಥಾಪಿಸಿದರು.

‘‘ಫ್ಯಾಶನ್ ವಸ್ತುಗಳ ಸಣ್ಣ ಪೂರೈಕೆ ಕಂಪೆನಿಯಾಗಿ ಆರಂಭಗೊಂಡ ಕಂಪೆನಿ ಇಂದು ದೊಡ್ಡದಾಗಿ ಬೆಳೆದಿದೆ. ಸಿಂಗಾಪುರದ ವ್ಯಾಪಕ ಇಂಟರ್‌ನೆಟ್ ಸಂಪರ್ಕ ಮತ್ತು ಸ್ಮಾರ್ಟ್‌ಫೋನ್ ಪ್ರೀತಿಯ ಪ್ರಯೋಜನವನ್ನು ಪಡೆದುಕೊಂಡು ಅದು ಬೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News