ತಾಜುಲ್ ಉಲಮಾ ಉರೂಸ್: ಕರ್ನಾಟಕ ಪ್ರಚಾರ ಸಮಿತಿಗೆ ಆಯ್ಕೆ

Update: 2019-10-09 12:53 GMT

ಉಳ್ಳಾಲ, ಅ. 9: ಉಳ್ಳಾಲದ ಮದನಿ ತಂಙಳ್ ಸನ್ನಿಧಿಯಲ್ಲಿ 65 ವರ್ಷಗಳ ಕಾಲ ಧಾರ್ಮಿಕ ದೀನೀ ಸೇವೆಗೈದ ಉಲಮಾ ನಾಯಕ ಮರ್ಹೂಂ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ 6ನೇ ಉರೂಸ್ ಕಾರ್ಯಕ್ರಮವು ನವಂಬರ್ 29, 30, ಡಿಸೆಂಬರ್ 1ರಂದು ಜರುಗಲಿದ್ದು, ಅದರ ಪ್ರಚಾರಾರ್ಥ ಕರ್ನಾಟಕ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ.

ಮಂಜನಾಡಿಯ ಅಲ್ ಮದೀನಾ ಯತೀಂ ಖಾನ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಮದನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಚಾರ-ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಎಸ್‌ಕೆ ಖಾದರ್ ಹಾಜಿ ಮುಡಿಪು, ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ ಮಲಾಝ್ ಆಯ್ಕೆಯಾಗಿದ್ದಾರೆ. ಸಮಿತಿಯಲ್ಲಿ 99 ಪ್ರಮುಖರು ಕಾರ್ಯ ನಿರ್ವಹಿಸಲಿದ್ದಾರೆ.

ಅಲ್ ಮದೀನಾ ವ್ಯವಸ್ಥಾಪಕ ಅಬ್ದುಲ್ ಖಾದರ್ ಸಖಾಫಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಮುನೀರ್ ಸಖಾಫಿ ಉಳ್ಳಾಲ, ಸಾಮಣಿಗೆ ಮುಹಮ್ಮದ್ ಮದನಿ, ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಮಾತನಾಡಿದರು.

ವೇದಿಕೆಯಲ್ಲಿ ಹನೀಫ್ ಹಾಜಿ ಉಳ್ಳಾಲ, ಅಶ್ರಫ್ ಕಿನಾರ, ಕೆಇ ಅಬ್ದುಲ್ ಖಾದರ್ ರಝ್ವಿ ಸಾಲೆತ್ತೂರು, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ, ಪುತ್ತುಬಾವ ಹಾಜಿ ಮುಡಿಪು, ಅಬ್ದುಲ್ ಖಾದರ್ ಸಾಲೆತ್ತೂರು, ಖಾಲಿದ್ ಹಾಜಿ ಭಟ್ಕಳ, ಬಶೀರ್ ಮದನಿ ಕೂಳೂರು, ಹಂಝ ಮದನಿ ಮಿತ್ತೂರು, ಅಬ್ದುಲ್ ರಝಾಕ್ ಹಾಜಿ ಮಲಾರ್, ಖಾಲಿದ್ ಹಾಜಿ ನ್ಯೂಪಡ್ಪು, ಇಸ್ಮಾಯಿಲ್ ಸಅದಿ ಉರುಮಣೆ, ಇಸ್ಮಾಯೀಲ್ ಮಾಸ್ಟರ್ ಮಂಜನಾಡಿ, ಮುನೀರ್ ಮಾಸ್ಟರ್ ತಲಕ್ಕಿ, ಆರ್.ಕೆ. ಮದನಿ ಅಮ್ಮೆಂಬಳ, ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಮತ್ತಿತರರು ಪಾಲ್ಗೊಂಡಿದ್ದರು.

ಮುನೀರ್ ಸಖಾಫಿ ಸ್ವಾಗತಿಸಿದರು. ಶಿಹಾಬುದ್ದೀನ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News