×
Ad

ಮರ್ಹೂಮ್ ಇಸ್ಮಾಯಿಲ್ ಔಸಾಫ್ ಸ್ಮರಣಾರ್ಥ: ಎಸ್‌ಐಒ ಉಳ್ಳಾಲ ಘಟಕದಿಂದ ಫುಟ್ಬಾಲ್ ಪಂದ್ಯಾಟ

Update: 2019-10-09 18:33 IST

ಉಳ್ಳಾಲ, ಅ. 9: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾದ ಉಳ್ಳಾಲ ಘಟಕದ ವತಿಯಿಂದ ಮರ್ಹೂಮ್ ಇಸ್ಮಾಯಿಲ್ ಔಸಾಫ್ ಸ್ಮರಣಾರ್ಥ ಮಕ್ಕಳಿಗಾಗಿ ಫುಟ್ಬಾಲ್ ಪಂದ್ಯಾಟವು ತೊಕ್ಕೊಟ್ಟು ಬಬ್ಬುಕಟ್ಟೆಯ ಪ್ರೈಮ್ ಸ್ಪೋರ್ಟ್ಸ್ ಆರೆನಾದಲ್ಲಿ ಇತ್ತೀಚೆಗೆ ನಡೆಯಿತು.

ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ, ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ರಿಝವಾನ್ ಅಝಹರಿ, ಉದ್ಯಮು ಇಸ್ಮಾಯಿಲ್ ಸಾಗರ್, ಪ್ರೈಮ್ ಸ್ಪೋರ್ಟ್ಸ್ ಅರೆನಾದ ಪಾಲುದಾರ ಇಸಾಕ್ ಸನ, ಉಪನ್ಯಾಸಕ ಡಾ. ಮುಬೀನ್ ಉಳ್ಳಾಲ್, ಇಎಚ್ ಮಹಮೂದ್, ಅಲ್ ಫುರ್ಕಾನ್ ಅರೇಬಿಕ್ ಇನ್‌ಸ್ಟಿಟ್ಯೂಟ್ ಸಂಚಾಲಕ ಇಸಾಕ್ ಕಲ್ಲಾಪು, ಸಮಾಜ ಸೇವಾ ಘಟಕದ ಸಿಎಚ್ ಸಲಾಂ, ಎಸ್‌ಐಒ ಉಳ್ಳಾಲ ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಚೆಂಡು ಪೋಸ್ಟ್ಗೆ ಹೊಡೆಯುವ ಮುಖಾಂತರ ಪಂದ್ಯಾಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸುಮಾರು 25 ತಂಡಗಳು ಭಾಗವಹಿಸಿದ್ದು ಡಿಎಕ್ಸೃ್ ಉಳ್ಳಾಲ ತಂಡವು ಚಾಂಪಿಯನ್ ಆಗಿ ಹೊರ ಹೂಮ್ಮಿತು, ಬ್ರದರ್ಸ್ ಉಚ್ಚಿಲ್ ತಂಡವು ರನ್ನರ್‌ಗೆ ತೃಪ್ತಿ ಪಟ್ಟಿತು.

ಸಾಲಿಡಾರಿಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷ ಫರ್ವೇಝ್ ಮತ್ತು ಜಮಾಆತೆ ಇಸ್ಲಾಮಿ ಉಳ್ಳಾಲ ಘಟಕದ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ವಿಜೇತರಿಗೆ ಬಹುಮಾನ ವಿತರಿಸಿದರು. ಮಯೀಝ್ ಕಿರಾಅತ್ ಪಠಿಸಿದರು. ಅಶೀರುದ್ದೀನ್ ಆಲಿಯಾ ಮತ್ತು ಇರ್ಷಾದ್ ವೇಣೂರ್ ಕಾರ್ಯಕ್ರಮ ನೀರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News