ಮಾಂಸ ಎಸೆದಿದ್ದಾರೆಂದು ಸುಳ್ಳು ಹರಡಿದ ದುಷ್ಕರ್ಮಿಗಳು: ದುರ್ಗಾ ಪ್ರತಿಮೆ ವಿಸರ್ಜನೆ ವೇಳೆ ಹಿಂಸಾಚಾರ

Update: 2019-10-09 14:35 GMT

ಬಸ್ತಿ (ಉ.ಪ್ರ.),ಅ.12: ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಮಂಗಳವಾರ ದುರ್ಗಾ ಪ್ರತಿಮೆಯ ವಿಸರ್ಜನೆಗೆ ಮುನ್ನ ನಡೆದ ಮೆರವಣಿಗೆಯಲ್ಲಿ ವಿಗ್ರಹದ ಮೇಲೆ ಮಾಂಸದ ತುಂಡನ್ನು ಎಸೆಯಲಾಗಿದೆಯೆಂಬ ವದಂತಿಗಳು ಹರಡಿದ ಬಳಿಕ ಉದ್ರಿಕ್ತ ಜನರ ಗುಂಪೊಂದು ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಿತು ಹಾಗೂ ವಾಹನಗಳನ್ನು ಧ್ವಂಸಗೊಳಿಸಿರುವುದಾಗಿ ವರದಿಯಾಗಿದೆ.

ಬಸ್ತಿ ನಗರದ ರಾಮಜಾನಕಿ ರಸ್ತೆ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಉದ್ರಿಕ್ತ ಜನರು ಅಂಗಡಿಗಳ ಮೇಲೆ ದಾಳಿ ನಡೆಸಿತು ಹಾಗೂ ಆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಪುಡಿಗೈದಿತೆಂದು ಮೂಲಗಳು ತಿಳಿಸಿವೆ.

 ಆದಾಗ್ಯೂ ಮೆರವಣಿಗೆಯ ಮೇಲೆ ಮಾಂಸದ ತುಂಡನ್ನು ಎಸೆಯಲಾಗಿದೆ ಎಂಬ ವದಂತಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಶಾಂತಿಯುತ ಪರಿಸ್ಥಿತಿಯನ್ನು ಕದಡಲು ಕಿಡಿಗೇಡಿಗಳು ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ. ಆದರೆ ಸಮಾಜದ್ರೋಹಿ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆದು ಹಿಂಸಾಚಾರದಲ್ಲಿ ತೊಡಗಿದ್ದಾರೆಂದು ಡಿಐಜಿ ಅಶುತೋಷ್ ಕುಮಾರ್ ಆರೋಪಿಸಿದ್ದಾರೆ. ಹಿಂಸಾಚಾರ ಎಸಗಿದ ದುಷ್ಕರ್ಮಿ ಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹಿಂಸಾಚಾರ ಹರಡು ವುದನ್ನು ತಡೆಯಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News