ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಸೈಬರ್ ಅಪರಾಧಗಳ ವರದಿ: ನಿಶಾ ಜೇಮ್ಸ್

Update: 2019-10-09 14:40 GMT

ಉಡುಪಿ, ಅ.9: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲ್ಮಟ್ಟದಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯ ಸೈಬರ್ ಅಪರಾಧಗಳು ವರದಿ ಯಾಗುತ್ತಿವೆ. ಇಲ್ಲಿನ ಜನರು ತಂತ್ರಜ್ಞಾನಗಳನ್ನು ಅತ್ಯಧಿಕವಾಗಿ ಬಳಸುತ್ತಿರುವುದ ರಿಂದ ಆನ್‌ಲೈನ್ ಮೂಲಕ ನಡೆಯುವ ಅಪರಾಧಗಳಿಗೆ ಬೇಗ ಬಲಿಪಶು ಗಳಾಗುತಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆಯ ವತಿಯಿಂದ ಕುಂಜಿಬೆಟ್ಟಿನ ಶ್ರೀಮಹಾಲಸ ದಾಮೋದರ ಟವರ್ಸ್‌ನ ಮೊದಲ ಮಹಡಿಯಲ್ಲಿರುವ ಐಸಿಎಐ ಭವನದ ಸಭಾಂಗಣದಲ್ಲಿ ಆಯೋಜಿಸಲಾದ ‘ಸೈಬರ್ ಅಪರಾಧ ಮತ್ತು ಬೆದರಿಕೆಗಳು- ರಕ್ಷಣೆ ಮತ್ತು ರಕ್ಷಣೆಗಾಗಿ ಉತ್ತಮ ಅಭ್ಯಾಸ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರಾವಳಿಯ ಜನರು ಆಧುನಿಕ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣ ಗಳಂತೆ, ಆನ್‌ಲೈನ್ ಪಾವತಿಗಳಲ್ಲೂ ಕರಾವಳಿ ಉನ್ನತ ಮಟ್ಟದಲ್ಲಿದೆ. ಇದು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳು ವವರಿಗೆ ಸುಲಭದಲ್ಲಿ, ದೊಡ್ಡಪ್ರಮಾಣದಲ್ಲಿ ಮೋಸ ಮಾಲು ಅವಕಾಶ ಒದಗಿಸುತ್ತಿದೆ ಎಂದರು.

ಸೈಬರ್ ಅಪರಾಧಗಳು, ಪೊಲೀಸರು ಎದುರಿಸುವ ಸಾಮಾನ್ಯ ಅಪರಾಧಗಳಂತಲ್ಲ. ಇಲ್ಲಿ ನಿಜವಾದ ಅಪರಾಧಗಳು ಕಣ್ಣಿನ ಮುಂದೆ ಗೋಚರಿಸುವುದಿಲ್ಲ. ಅಪರಾಧಕ್ಕೆ ಯಾವುದೇ ಸಾಕ್ಷಿಗಳಿರುವುದಿಲ್ಲ. ಸಂತ್ರಸ್ಥ ವ್ಯಕ್ತಿ ಇಲ್ಲಿನವರಾದರೂ, ಅಪರಾಧಿ ಬೇರೆ ಜಿಲ್ಲೆ, ರಾಜ್ಯ ಅಥವಾ ಬೇರೆ ದೇಶದಲ್ಲೇ ಕುಳಿತು ಈ ಅಪರಾಧವನ್ನು ಮಾಡಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವುಗಳ ಜಾಡನ್ನು ಹಿಡಿದು ಹೋಗುವುದು ತುಂಬಾ ಕ್ಲಿಷ್ಟಕರ ಎಂದು ಅವರು ನಿಶಾ ಜೇಮ್ಸ್ ವಿವರಿಸಿದರು.

ಹೀಗಾಗಿ ಸೈಬರ್ ಅಪರಾಧಗಳು ಪೊಲೀಸರ ಮುಂದೆ ದೊಡ್ಡ ಸವಾಲನ್ನು ಒಡ್ಡುತ್ತಿವೆ. ಸೈಬರ್ ಅಪರಾಧಗಳ ನಮೂನೆಯಲ್ಲೂ ಈಗ ಹೊಸ ಹೊಸ ಬದಲಾವಣೆಗಳು ಕಂಡುಬರುತ್ತಿವೆ. ಮೊದಲು ಎಟಿಎಂ ಕಾರ್ಡ್ ಹ್ಯಾಕ್ ಮಾಡಿ ಹಣ ಲಪಟಾಯಿಸುತಿದ್ದರೆ, ತೀರಾ ಈಚೆಗೆ ಜಿಲ್ಲೆಯಲ್ಲಿ ‘ಎಟಿಎಂ ಕಾರ್ಡ್ ಸ್ಕಿಮಿಂಗ್’ ಎಂಬ ಹೊಸ ತಂತ್ರದ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುವ ಅಪರಾಧವನ್ನು ಪತ್ತೆ ಹಚ್ಚಲಾಗಿದೆ ಎಂದರು.

ಇದರಿಂದ ಸೈಬರ್ ಅಪರಾಧಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಲ್ಲೂ ಆಧುನಿಕ ತರಬೇತಿ ನೀಡಬೇಕಾಗಿದೆ. ಹಾಗೂ ಇಡೀ ವ್ಯವಸ್ಥೆಯ ಸಾಮರ್ಥ್ಯವನ್ನು ವೃದ್ಧಿಸಬೇಕಾದ ಅಗತ್ಯವಿದೆ. ಈ ಮೂಲಕ ಆಧುನಿಕ ತಂತ್ರಜ್ಞಾನದ ಸವಾಲನ್ನು ನಾವು ಎದುರಿಸಬೇಕಾಗಿದೆ ಎಂು ನಿಶಾ ಜೇಮ್ಸ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಅಜಿತ್ ವಿ.ಪಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿಯನ್ನು ನೀಡಿದರು. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆಯ ಕಾರ್ಯದರ್ಶಿ ಕವಿತಾ ಎಂ.ಪೈ ಉಪಸ್ಥಿತರಿದ್ದರು.

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆಯ ಅಧ್ಯಕ್ಷ ನರಸಿಂಹ ನಾಯಕ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಮಾಜಿ ಅಧ್ಯಕ್ಷೆ ರೇಖಾ ದೇವಾನಂದ ನಿಶಾ ಜೇಮ್ಸ್‌ರನ್ನು ಸನ್ಮಾನಿಸಿದರು. ಆಂಡ್ರಿಯಾ ಎಸ್. ಲೂವಿಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News