×
Ad

ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಸನ್ಮಾನ

Update: 2019-10-09 20:27 IST

ಮಂಗಳೂರು, ಅ.9: ನಾಡೋಜ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ.ಶೇಷಪ್ಪ ಬಂಬಿಲ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ವೆನ್ಲಾಕ್ ಜಿಲ್ಲಾಸ್ಪತ್ರೆಯ ಆಡಳಿತ ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ಶೇಷಪ್ಪ ಬಂಬಿಲ ಅವರು ರೋಗಿಗಳ ಪಟ್ಟಿ ತಯಾರಿಸಿ ಕ್ಲಪ್ತ ಸಮಯಕ್ಕೆ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯದಲ್ಲಿ ಪ್ರತಿವರ್ಷ ಸಫಲರಾಗಿದ್ದಾರೆ. ಇವರ ಸೇವೆಗೆ ಸಂಸ್ಥೆಯ ಸಾಧನಾ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.

ಹಿರಿಯ ತಜ್ಞ ಡಾ.ಶಿವಪ್ರಕಾಶ್ ಮಾತನಾಡಿದರು.

ಈ ಸಂದರ್ಭ ಡಾ.ಜಿ.ಶಂಕರ್ ಸಂಸ್ಥೆಯ ಟ್ರಸ್ಟಿಗಳಾದ ಎಸ್.ಕೆ. ಆನಂದ, ಶಂಕರ್ ಸಾಲಿಯಾನ್, ಭಾರತೀಯ ಮಾನವ ಹಕ್ಕುಗಳ ಒಕ್ಕೂಟದ ಕೊಲ್ಲಾಡಿ ಬಾಲಕೃಷ್ಣ ರೈ, ಜಿಲ್ಲಾ ಮಾನವ ಹಕ್ಕು ಒಕ್ಕೂಟದ ಜಿಲ್ಲಾಧ್ಯಕ್ಷ ವಸಂತ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ಡಾ.ರಾಜೇಶ್ವರಿ ದೇವಿ, ಆರ್‌ಎಂಒ ಡಾ.ಜುಲಿಯಾನ ಸಲ್ಡಾನ, ಹಿರಿಯ ವೈದ್ಯಾಧಿಕಾರಿ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News