ವಿನಾಶಕಾರಿ ಮೀನುಗಾರಿಕೆ ಪದ್ಧತಿಗೆ ರಾಜ್ಯ ಸರಕಾರ ನಿರ್ಬಂಧ

Update: 2019-10-09 15:21 GMT

ಉಡುಪಿ, ಅ.9:ರಾಜ್ಯ ಸರಕಾರವು ಈ ಕೆಳಕಂಡ ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಬುಲ್‌ಟ್ರಾಲಿಂಗ್ ಮೀನುಗಾರಿಕೆ, ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯ ವಸ್ತುಗಳನ್ನು/ ಪದಾರ್ಥಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆಬಂಡಾಸ್ ಮೀು ಹಿಡಿಯುವುದನ್ನು ನಿಷೇಧಿಸಲಾಗಿದೆ.

ಬುಲ್‌ಟ್ರಾಲಿಂಗ್ ಮೀನುಗಾರಿಕೆ, ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯ ವಸ್ತುಗಳನ್ನು/ ಪದಾರ್ಥಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆಬಂಡಾಸ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.

ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಗರಿಷ್ಠ 350 ಅಶ್ವಶಕ್ತಿ ಇಂಜಿನ್ ಅಳವಡಿಸಲು ಅನುಮತಿಸಲಾಗಿದೆ. ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಕಡ್ಡಾಯವಾಗಿ ಏಕರೂಪದ ಬಣ್ಣ ಹಚ್ಚಲು ಸೂಚಿಸಲಾಗಿದೆ. ಎಲ್ಲಾ ಟ್ರಾಲ್ ಮೀನುಗಾರಿಕೆ ದೋಣಿಗಳಿಗೆ ಕಡ್ಡಾಯವಾಗಿ 35 ಎಂ.ಎಂ ಅಳತೆಯ ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಲೆಯನ್ನು ಉಪಯೋಗಿಸುವುದು ಕಡ್ಡಾಯವಾಗಿದೆ.

ಎಲ್ಲಾ ಪರ್ಸಿನ್ ಮತ್ತು ಔಟ್‌ಬೋರ್ಡ್ ಇಂಜಿನ್ ಅಳವಡಿಸಿದ ಮೀನುಗಾರಿಕಾ ದೋಣಿಗಳು ಕಡ್ಡಾಯವಾಗಿ 20 ಎಂಎಂ ಅಳತೆಗಿಂತ ಸಣ್ಣ ಕಣ್ಣಿನ ಬಲೆಗಳನ್ನು ಉಪಯೋಗಿಸಬಾರದು. ಕರಾವಳಿ ತೀರ ಪ್ರದೇಶದಲ್ಲಿ ಪಚ್ಚಿಲೆ (ಗ್ರೀನ್‌ಮಸಲ್) ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಒಟ್ಟು 19 ಜಾತಿಯ ಮೀನುಗಳ ಹಿಡುವಳಿಯನ್ನು ಕನಿಷ್ಟ ಕಾನೂನಾತ್ಮಕ ಗಾತ್ರ ನಿಗದಿಪಡಿಸಿ ಸರಕಾರ ಆದೇಶಹೊರಡಿಸಿದೆ.

ಈ ಮೇಲಿನ ಎಲ್ಲಾ ನಿಷೇಧಿತ ಪದ್ಧತಿಗಳನ್ನು ಕಡ್ಡಾಯವಾಗಿ ನಡೆಸದಿ ರುವಂತೆ, ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News