ಅಧಿಕೃತ ಆಟೋ ರಿಕ್ಷಾ ಪಾರ್ಕ್ ಮಾಡಲು ತಹಶೀಲ್ದಾರ್ ರಿಗೆ ಎಸ್ಡಿಎಸಿಯು ಮನವಿ
ಬಂಟ್ವಾಳ, ಅ. 11: ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಬಿಸಿರೋಡ್ ಮತ್ತು ಕೈಕಂಬದ ವಿವಿಧ ಕಡೆ ಅಧಿಕೃತ ಆಟೋ ರಿಕ್ಷಾ ಪಾರ್ಕ್ ಮಾಡಲು ಎಸ್ಡಿಟಿಯು ಆಶ್ರಯದಲ್ಲಿ ರುವ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಬಂಟ್ವಾಳ ತಾಲೂಕು ನಿಯೋಗವು ತಹಶಿಲ್ದಾರರಿಗೆ ಮನವಿ ನೀಡಿತು.
ಬಿಸಿರೋಡ್ ಸೇತುವೆ ಅಡಿಯಲ್ಲಿ, ನಾಡ ಕಚೇರಿ ಬಳಿ, ಕೆಎಸ್ಸಾರ್ಟಿಸಿ ಬಸ್ ಸ್ಟಾಂಡ್ ಎದುರು, ಪರ್ಲಿಯಾ ನರ್ಸಿಂಗ್, ಕೈಕಂಬ ಅಶೋಕ್ ಮೆಡಿಕಲ್ ಎದುರು, ಕೈಕಂಬ ಲುಕ್ಮಾನ್ ಸ್ಟೀಲ್ ಸೆಂಟರ್ ಎದುರು, ಎಸ್ .ಆರ್ ಸ್ಟೋರ್ ಎದುರು ಅಧಿಕೃತ ರಿಕ್ಷಾ ಪಾರ್ಕ್ ಮಾಡಲು ಮನವಿ ಯಲ್ಲಿ ತಿಳಿಸಲಾಗಿದೆ.
ನಿಯೋಗ ದಲ್ಲಿ ಆಟೋ ಯೂನಿಯನ್ ಬಂಟ್ವಾಳ ತಾಲೂಕ್ ಅಧ್ಯಕ್ಷ ಸಂಶುದ್ದೀನ್ , ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೋಳಕೆ, ಆಟೋ ಯೂನಿಯನ್ ಕಾರ್ಯದರ್ಶಿ ಇಲ್ಯಾಸ್ ವಗ್ಗ, ಅದಿಕ್ರತ ಆಟೋ ರಿಕ್ಷ ಪಾರ್ಕ್ ಮಾಡಲು ತಹಶಿಲ್ದಾರರಿಗೆ ಎಸ್ಡಿಎಸಿಯು ಮನವಿ ಮಾಡಿತು.
ನಿಯೋಗದಲ್ಲಿ ಆಟೋ ಯೂನಿಯನ್ ಬಂಟ್ವಾಳ ತಾಲೂಕ್ ಅಧ್ಯಕ್ಷ ಸಂಶುದ್ದೀನ್ , ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೋಳಕೆ, ಆಟೋ ಯೂನಿಯನ್ ಕಾರ್ಯದರ್ಶಿ ಇಲ್ಯಾಸ್ ವಗ್ಗ, ತಾಲೂಕು ಸಮಿತಿ ಸದಸ್ಯ ಅಝೀಝ್ ಕಾರಾಜೆ, ಇಸ್ಮಾಯಿಲ್ ಕೈಕಂಬ, ನಝೀರ್ ಮತ್ತಿತರರು ಉಪಸ್ಥಿತರಿದ್ದರು