ಹಜ್‌ಯಾತ್ರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ
Update: 2019-10-11 18:16 IST
ಮಂಗಳೂರು, ಅ.11: ಮುಂದಿನ ವರ್ಷ (2020ರಲ್ಲಿ) ಪವಿತ್ರ ಹಜ್‌ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಹಜ್ ಫಾರ್ಮ್‌ನ್ನು ಅನ್‌ಲೈನ್ Hajcommittee.gov.in ಮೂಲಕ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು 2019ರ ನವೆಂಬರ್ 10 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸುವಾಗ ಪಾಸ್‌ಪೋರ್ಟ್‌ನ ಪ್ರತಿ, ಭಾವಚಿತ್ರ, ವಿಳಾಸ ದಾಖಲೆ ಪತ್ರವನ್ನು ಲಗತ್ತಿಸಬೇಕು. ಪಾಸ್‌ಪೋರ್ಟ್ ವ್ಯಾಲಿಡಿಟಿಯು 20-01-2021 ಆಗಿರುತ್ತದೆ ಎಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.