​ಮಂಗಳೂರು: ಮೂವರು ಮಹಿಳೆಯರು ನಾಪತ್ತೆ

Update: 2019-10-11 15:34 GMT

ಮಂಗಳೂರು, ಅ.11: ಪ್ರಜ್ಞಾ ಸ್ವಾದಾರ ಕೇಂದ್ರದಿಂದ ಮೂವರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜ್ಞಾ ಸ್ವಾದಾರ ಕೇಂದ್ರ ಜಪ್ಪಿನಮೊಗರು ಸಂಸ್ಥೆಯಲ್ಲಿ ದಾಖಲಾಗಿದ್ದ ಕುಮಾರಿ(30), ಅಮಲ(30), ಸಂಧ್ಯಾ(28) ಹೆಸರಿನ ಮೂವರು ಮಹಿಳೆಯರು ಅ.8ರಂದು ರಾತ್ರಿ 11ರ ಸುಮಾರು ಸ್ವಾದಾರ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ.

ಚಹರೆ: ನಾಪತ್ತೆಯಾಗಿರುವ ಕುಮಾರಿ 5.6 ಅಡಿ ಎತ್ತರ ಇದ್ದು, ಕಪ್ಪು ಮೈ ಬಣ್ಣ, ವರಟು ಮುಖ, ದಪ್ಪಗಿನ ಶರೀರ, ಕಪ್ಪು ಮತ್ತು ಬಿಳಿ ಮಿಶ್ರಿತ ಚೂಡಿದಾರ ಮತ್ತು ಕೇಸರಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಮಾತನಾಡುತ್ತಾರೆ.

ನಾಪತ್ತೆಯಾಗಿರುವ ಅಮಲ ಮೂಲತಃ ತಮಿಳುನಾಡಿನವರು. 5.5 ಅಡಿ ಎತ್ತರ, ಕಪ್ಪು ಮೈ ಬಣ್ಣ, ಪಿಂಕ್ ಬಣ್ಣದ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದರು. ತಮಿಳು, ಕನ್ನಡ ಮಾತನಾಡುತ್ತಾರೆ.

ನಾಪತ್ತೆಯಾಗಿರುವ ಮತ್ತೋರ್ವ ಮಹಿಳೆ ಸಂಧ್ಯಾ ಮಂಗಳೂರಿನ ಪೆರಾರೆ ಹೊಯ್ಗೆಪದವು ನಿವಾಸಿ. 4.5 ಅಡಿ ಎತ್ತರ, ಗೋಧಿ ಮೈ ಬಣ್ಣ, ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಮಾತನಾಡುತ್ತಾರೆ.

ಕಾಣೆಯಾಗಿರುವ ಮೂವರು ಮಹಿಳೆಯರ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ದೂ.ಸಂ.: 0824-2220529/ 2220800, 9480805354ನ್ನು ಸಂಪರ್ಕಿಸಲು ಕಂಕನಾಡಿ ನಗರ ಠಾಣೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News