×
Ad

ಮಂಗಳೂರಿನಲ್ಲಿ ಹಳೆಯ ನೋಟು-ನಾಣ್ಯಗಳ ಪ್ರದರ್ಶನ

Update: 2019-10-11 22:18 IST

ಮಂಗಳೂರು,ಅ.11:ಫಿಲಾಟೆಲಿಕ್ ಡೀಲರ್ಸ್‌ ಅಸೋಸಿಯೇಶನ್ ಇಂಡಿಯಾ ವತಿಯಿಂದ ನಗರದ ಎಂ.ಜಿ. ರಸ್ತೆಯ ದೀಪಾ ಕಂರ್ಟ್ಸ್ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರದಿಂದ ಏರ್ಪಡಿಸಲಾದ ಅಂಚೆ ಚೀಟಿಗಳು, ಹಳೆಯ ನಾಣ್ಯ ಮತ್ತು ನೋಟುಗಳ ಪ್ರದರ್ಶನವು ಜನರ ಗಮನ ಸೆಳೆಯುತ್ತಿದೆ. ರವಿವಾರದವರೆಗೆ ಈ ಪ್ರದರ್ಶನ ನಡೆಯಲಿದೆ.

ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಿಸುವ ಹವ್ಯಾಸಿಗಳು ಮತ್ತು ಮಾರಾಟಗಾರರು ಸೇರಿಕೊಂಡು ಆಯೋಜಿಸಲಾದ ಪ್ರದರ್ಶನದಲ್ಲಿ ದೇಶಾದ್ಯಂತದ 20 ಮಂದಿ ಡೀಲರ್‌ಗಳು ದೇಶ, ವಿದೇಶಗಳ ಅಂಚೆ ಚೀಟಿಗಳು, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಕಾಣಬಹುದಾಗಿದೆ.

ಚಿನ್ನ, ಬೆಳ್ಳಿ ಮತ್ತಿತರ ಲೋಹಗಳಿಂದ ಹಾಗೂ ರಬ್ಬರ್, ರೇಶ್ಮೆ, ಮೀನಿನ ಚರ್ಮ ಇತ್ಯಾದಿಗಳಿಂದ ತಯಾರಿಸಿದ ನಾಣ್ಯಗಳು, ವಿವಿಧ ಗಾತ್ರದ ಅಂಚೆ ಚೀಟಿಗಳು, ಪಾಂಡಿಚೇರಿಯಲ್ಲಿ ಫ್ರೆಂಚ್ ಆಡಳಿತದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಇಂಡೊ-ಫ್ರೆಂಚ್ ನಾಣ್ಯಗಳು, ಬ್ರಿಟಿಷ್ ಇಂಡಿಯಾ ನೋಟುಗಳು, ಗಾಂಧಿ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗಿದೆ.

ಫಿಲಾಟೆಲಿಕ್ ಡೀಲರ್ಸ್‌ ಅಸೋಸಿಯೇಶನ್ ಇಂಡಿಯಾದ ಅಧ್ಯಕ್ಷ ಮಧುಕರ್ ಜಿಂಗನ್ ಪ್ರದರ್ಶನದ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಂಚೆ ಚೀಟಿಗಳು, ನಾಣ್ಯಗಳನ್ನು ಮತ್ತು ಕರೆನ್ಸಿಗಳನ್ನು ಸಂಗ್ರಹಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಯುವ ಜನಾಂಗ ಇದನ್ನು ಹವ್ಯಾಸವಾಗಿ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.

ಈ ಸಂದರ್ಭ ಅಸೋಸಿಯೇಶನ್‌ನ ಉಪಾಧ್ಯಕ್ಷ ಎ.ವಿ.ಜಯಚಂದ್ರನ್, ನಾಗರಾಜ್ ಶೇಟ್, ಪ್ರವೀಣ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News