ವಿದೇಶ ವ್ಯವಹಾರ ಸಮಿತಿ ಸದಸ್ಯತ್ವ ನಿರಾಕರಿಸಿದ ಶಶಿ ಥರೂರ್

Update: 2019-10-11 17:12 GMT

ಹೊಸದಿಲ್ಲಿ, ಅ.11: ವಿದೇಶ ವ್ಯವಹಾರದ ಕುರಿತ ಸಂಸದೀಯ ಸಮಿತಿ ಸದಸ್ಯತ್ವವನ್ನು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ಥರೂರ್ ನಿರಾಕರಿಸಿರುವುದಾಗಿ ಮೂಲಗಳು ತಿಳಿಸಿವೆ. ಕಳೆದ ಲೋಕಸಭೆಯಲ್ಲಿ ಶಶಿ ಥರೂರ್ ಈ ಸಮಿತಿಯ ಅಧ್ಯಕ್ಷರಾಗಿದ್ದರು.

ಈ ಬಾರಿ ಅವರನ್ನು ಸಮಿತಿ ಸದಸ್ಯರನ್ನಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ನೇಮಿಸಿದ್ದರು. ಆದರೆ ಈ ಹಿಂದೆ ಅಧ್ಯಕ್ಷರಾಗಿದ್ದ ಸಮಿತಿಯಲ್ಲಿ ಈಗ ಸದಸ್ಯನಾಗಿ ಮುಂದುವರಿಯಲು ತನಗೆ ಇಚ್ಛೆಯಿಲ್ಲ ಎಂದು ಥರೂರ್ ತಿಳಿಸಿರುವುದಾಗಿ ವರದಿಯಾಗಿದೆ. ಥರೂರ್ ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಒಂದು ಸಮಿತಿಯ ಅಧ್ಯಕ್ಷರಾಗಿರುವುದರಿಂದ ಸಾಕಷ್ಟು ಕೆಲಸದ ಒತ್ತಡವಿರುತ್ತದೆ. ಆದ್ದರಿಂದ ಮತ್ತೊಂದು ಸಮಿತಿಯಲ್ಲಿ ಸದಸ್ಯನಾಗಿ ಇರಲು ಬಯಸುವುದಿಲ್ಲ ಎಂದು ಥರೂರ್ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News