ಕದ್ರಿ ಗೋಪಾಲನಾಥ್ ಓರ್ವ ಅದ್ಬುತ ಸಾಕ್ಸೋ ಫೋನ್ ಮಾಂತ್ರಿಕ: ಶ್ರೀಚಂದ್ರಶೇಖರ ಸ್ವಾಮೀಜಿ
ಮಂಗಳೂರು: ಸ್ಯಾಕ್ಸೋಫೋನ್ ವಾದನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಬರುವಂತೆ ಮಾಡಿ ವಿಶ್ವದಲ್ಲೇ ಈ ಕಲೆಯನ್ನು ಪಸರಿಸಿದ ಕದ್ರಿ ಗೋಪಾಲನಾಥ ಓರ್ವ ಅದ್ಬುತ ಸಾಕ್ಸೋ ಫೋನ್ ಮಾಂತ್ರಿಕ ಎಂದು ಬೆಂಗಳೂರಿನ ಧಾರ್ಮಿಕ ಗುರು ವಾಸ್ತು ತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಬಣ್ಣಿಸಿದ್ದಾರೆ.
ತಮ್ಮಆಶ್ರಮದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಮೆರಗು ನೀಡಿದ ಓರ್ವ ಮಹಾನ್ ಕಲಾವಿದನನ್ನು ನಾವು ಕಳೆದು ಕೊಂಡಿದ್ದೇವೆ ಎಂದು ನೆನಪಿಸಿಕೊoಡಿರುವ ಅವರು ಅಜಾತ ಶತ್ರು ಎಂದು ಸಂದೇಶದಲ್ಲಿ ತಿಳಿಸಿದ್ದಾರೆ
ಕದ್ರಿಗೋಪಾಲನಾಥ್ ನಿಧನಕ್ಕೆ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು, ಮುಲ್ಕಿ ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಕ.ಸಾ. ಪ. ಅಧ್ಯಕ್ಷ. ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ವಿಜಯ ಕುಮಾರ್ ಪುನೀತ್ ಕೃಷ್ಣ ವಿಶ್ವನಾಥ ಭಟ್ ಬಪ್ಪನಾಡು ನಾಗೇಶ್ ,ಚಂದ್ರಶೇಖರ ಸುವರ್ಣ ಗೌತಮ್ ಜೈನ ,ಪಟೇಲ್ ವಿಶ್ವನಾಥ ರಾವ್, ರಂಗನಾಥ ಶೆಟ್ಟಿ, ಸುನಿಲ್ ಆಳ್ವ, ಅಬ್ದುಲ್ ರಝಾಕ್, ವಿನೋದ್ ಸಾಲಿಯಾನ್ ಕಿಶೋರ್ ಶೆಟ್ಟಿ ,ಪ್ರಾಣೇಶ್ ಹೆಜ್ಮಾಡಿ, ಸಾಧು ಅಂಚನ್, ಗೋಪಿನಾಥ್ ಪುನರೂರು ಉದಯಕುಮಾರ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.