ಐಎಂಎ ಉಡುಪಿ ಕರಾವಳಿ ಅಧ್ಯಕ್ಷರಾಗಿ ಡಾ.ಉಮೇಶ್ ಪ್ರಭು
ಉಡುಪಿ, ಅ.12: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ -ಕರಾವಳಿ ಇದರ ನೂತನ ಅಧ್ಯಕ್ಷರಾಗಿ ಉಡುಪಿ ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ಮೂಳೆ ತಜ್ಞ ಡಾ.ಉಮೇಶ್ ಪ್ರಭು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಡಾ.ಪ್ರಕಾಶ್ ಭಟ್, ಜೊತೆ ಕಾರ್ಯದರ್ಶಿಯಾಗಿ ಡಾ.ಗಣಪತಿ ಹೆಗ್ಡೆ, ಕೋಶಾಧಿಕಾರಿಯಾಗಿ ಡಾ.ರಂಜಿತಾ ಎಸ್.ನಾಯಕ್, ಜೊತೆ ಕೋಶಾಧಿಕಾರಿಯಾಗಿ ಡಾ.ವಿಜಯಾ ವೈ.ಬಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಡಾ.ಶಂಕರ್‌ಪ್ರಸಾದ್, ಡಾ.ಶ್ಯಾಮ್‌ಸುಂದರ್ ಭಟ್, ಡಾ. ಶಶಿಕಿರಣ್, ಡಾ.ಭಾಸ್ಕರ ಪಾಲನ್, ಡಾ.ಪ್ರಶಾಂತ್ ಶೆಟ್ಟಿ ಕಾಪು, ಡಾ.ನರೇಂದ್ರ ಶೆಣೈ, ಡಾ.ಸಂದೀಪ್ ಪೈ, ಡಾ.ಜನಾರ್ದನ ಪ್ರಭು, ಡಾ.ಸನತ್ ರಾವ್, ಡಾ.ಶರತ್‌ಚಂದ್ರ ರಾವ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಡಾ.ಪಿ.ವಿ. ಭಂಡಾರಿ, ಡಾ.ನವೀನ್ ಬಲ್ಲಾಳ್, ಡಾ.ಸುರೇಶ್ ಶೆಣೈ, ಡಾ.ಮುರಳೀಧರ್ ಪಾಟೀಲ್, ಡಾ.ವಾಸುದೇವ ಎಸ್, ಕೇಂದ್ರ ಕಾರ್ಯಕಾರಿಣಿ ಸದಸ್ಯರಾಗಿ ಡಾ.ಆರ್.ಎನ್.ಭಟ್, ಡಾ.ವಿಜಯಕುಮಾರ್ ಶೆಟ್ಟಿ, ಡಾ.ಕೆ.ಸತೀಶ್ ಕಾಮತ್, ನಾಮನಿರ್ದೇಶಿತ ಸದಸ್ಯರಾಗಿ ಡಾ.ಪಿ.ಎಸ್.ಗುರುಮೂರ್ತಿ ಭಟ್, ಡಾ.ಕೃಷ್ಣಾನಂದ ಮಲ್ಯ, ಆಂತರಿಕ ಲೆಕ್ಕಪರಿಶೋಧಕರಾಗಿ ಡಾ.ರಾಜಲಕ್ಷ್ಮೀ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ.20ರಂದು ಸಂಜೆ ಗಂಟೆ 6ಗಂಟೆಗೆ ಉಡುಪಿ ಅಂಬಲಪಾಡಿ ಹೊಟೇಲ್ ಕಾರ್ತಿಕ್ ಎಸ್ಟೇಟ್‌ನ ಮಧುವನ್ ಸಭಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ಕದ್ರಿ ತೇಜಸ್ವಿನಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರೊ.ಎಂ.ಶಾಂತಾರಾಮ್ ಶೆಟ್ಟಿ ಪ್ರಮಾಣ ವಚನ ಬೋಧಿಸಲಿರುವರು. ನಂತರ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಐಎಂಎ ಪ್ರಕಟನೆ ತಿಳಿಸಿದೆ.