ಅ. 13ರಂದು ಪಿಎಫ್‍ಐ ವತಿಯಿಂದ ಮ್ಯಾರಥಾನ್ ರ್ಯಾಲಿ-ಯೋಗ ಪ್ರಾತ್ಯಕ್ಷಿಕೆ
Update: 2019-10-12 19:36 IST
ಬಂಟ್ವಾಳ, ಅ. 12: ಪಿಎಫ್‍ಐ ಬಂಟ್ವಾಳ ತಾಲೂಕು ಇದರ ವತಿಯಿಂದ "ಜನಾರೋಗ್ಯವೇ ರಾಷ್ಟ್ರ ಶಕ್ತಿ" ರಾಷ್ಟ್ರೀಯ ಆರೋಗ್ಯ ಅಭಿಯಾನದ ಪ್ರಯುಕ್ತ ಮ್ಯಾರಥಾನ್ ರ್ಯಾಲಿ ಹಾಗೂ ಯೋಗ ಪ್ರಾತ್ಯಕ್ಷಿಕೆ ಅ. 13ರಂದು ನಡೆಯಲಿದೆ.
ಅಂದು ಬೆಳಗ್ಗೆ 7 ಗಂಟೆಗೆ ಬಿ.ಸಿ.ರೋಡ್ ಸರ್ಕಲ್‍ನಿಂದ ಕೈಕಂಬ ಜಂಕ್ಷನ್‍ವರೆಗೆ ಮ್ಯಾರಥಾನ್ ರ್ಯಾಲಿ, ಸೈಕ್ಲಿಂಗ್, ಸ್ಕೇಟಿಂಗ್ ನಡೆಯಲಿದೆ. ಬಳಿಕ ಕೈಕಂಬ ಜಂಕ್ಷನ್‍ನಲ್ಲಿ ಯೋಗಾ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಪಿಎಫ್‍ಐ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಇಜಾಝ್ ಅಹ್ಮದ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.