ಅಮೆರಿಕ ಸಂಸತ್ತಿನಲ್ಲಿ ಗಾಂಧಿ ಪರಂಪರೆ ಕುರಿತ ನಿರ್ಣಯ ಮಂಡನೆ

Update: 2019-10-12 17:39 GMT

ವಾಶಿಂಗ್ಟನ್, ಅ. 12: ಮಹಾತ್ಮಾ ಗಾಂಧೀಜಿಯ 150ನೇ ಜನ್ಮದಿನದ ಸಂದರ್ಭದಲ್ಲಿ ಅವರ ಪರಂಪರೆಯನ್ನು ಗೌರವಿಸಿ ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಶುಕ್ರವಾರ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಿರ್ಣಯವೊಂದನ್ನು ಮಂಡಿಸಿದರು.

‘‘ಮಹಾತ್ಮಾ ಗಾಂಧಿ ನನ್ನ ಹೀರೊಗಳ ಪೈಕಿ ಒಬ್ಬರು’’ ಎಂದು ನಿರ್ಣಯವನ್ನು ಮಂಡಿಸಿದ ಬಳಿಕ ಮಾತನಾಡಿದ ರಾಜಾ ಕೃಷ್ಣಮೂರ್ತಿ ಹೇಳಿದರು.

ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್- ಎರಡೂ ಪಕ್ಷಗಳಿಗೆ ಸೇರಿದ 14 ಸಂಸದರು ಈ ನಿರ್ಣಯವನ್ನು ಅನಮೋದಿಸಿದ್ದಾರೆ.

‘‘ಸಾರ್ವಜನಿಕ ಸೇವೆಗೆ ಗಾಂಧೀಜಿ ತನ್ನನ್ನು ಸಮರ್ಪಿಸಿಕೊಂಡಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಎಷ್ಟೇ ಕಷ್ಟ ಮತ್ತು ಅನ್ಯಾಯವನ್ನು ಎದುರಿಸಿದರೂ ಅವರು ಸ್ವಾತಂತ್ರ, ಘನತೆ ಮತ್ತು ಎಲ್ಲರಿಗೂ ಸಮಾನತೆಯ ಹೋರಾಟದಿಂದ ವಿಚಲಿತರಾಗಲಿಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News