×
Ad

ಮೂಡುಬಿದಿರೆ : ಸಿಡಿಲು ಬಡಿದು ಮನೆಗೆ ಹಾನಿ

Update: 2019-10-13 20:17 IST

ಮೂಡುಬಿದಿರೆ : ಪಾಲಡ್ಕ ಕಲ್ಲಸಂಕದ ಲಿಯೋ ಪಿಂಟೋ ಅವರ ಮನೆಗೆ  ಶನಿವಾರ ರಾತ್ರಿ ಸಿಡಿಲು ಬಡಿದ ಪರಿಣಾಮವಾಗಿ ಮನೆಯ ವಿವಿಧ ಭಾಗಗಳಿಗೆ ತೀವ್ರ ಹಾನಿಯಾಗಿದ್ದು ರೂ. 1 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಮನೆಯ ಮೇಲ್ಛಾವಣಿ, ಮುಚ್ಚಿಗೆ, ಮಂಚ, ಬಾಗಿಲುಗಳು, ವಿದ್ಯುತ್ ಸ್ವಿಚ್‍ ಬೋರ್ಡ್, ಟಿ.ವಿ. ಮತ್ತು ವಿದ್ಯುತ್ ದೀಪಗಳಿಗೆ ಹಾನಿ ಸಂಭವಿಸಿದೆ.

ವೀಳ್ಯದೆಲೆ ಬೆಳೆಸಿ ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದ ಲಿಯೋ  ಅವರ ಮನೆಯನ್ನು ಕಳೆದ ವರ್ಷವಷ್ಟೇ ಪಾಲಡ್ಕ ಚರ್ಚ್‍ನವರು ದುರಸ್ತಿ ಮಾಡಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News