ಮೂಡುಬಿದಿರೆಯಲ್ಲಿ ರೋಟರಿ ಕಲಾ ವೈಭವ

Update: 2019-10-13 14:50 GMT

ಮೂಡುಬಿದಿರೆ : ಸಾಂಸ್ಕೃತಿಕ ಉತ್ಸವಗಳು ಮಾನಸಿಕ ಸಂತೋಷಕ್ಕೆ ಸಹಕಾರಿಯಾಗುತ್ತದೆ. ರೋಟರಿ ಸದಸ್ಯರಿಗೆ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸುವುದರೊಂದಿಗೆ ಸಂಘಟನೆಗೂ ಪೂರಕವಾಗಿದೆ ಎಂದು ರೋಟರಿ ಉಪ ರಾಜ್ಯಪಾಲ ರಿತೇಶ್ ಬಾಳಿಗಾ ಹೇಳಿದರು. 

 ಅವರು ರೋಟರಿ ಕ್ಲಬ್ ಟೆಂಪಲ್ ಟೌನ್ ಆಶ್ರಯದಲ್ಲಿ ವಿದ್ಯಾಗಿರಿಯ ಕ್ಯಾಂಪಸ್‍ನಲ್ಲಿ ರವಿವಾರ ನಡೆದ ರೋಟರಿ ವಲಯ 4ರ ಸಾಂಸ್ಕೃತಿಕ ಸ್ಪರ್ಧೆ "ರೋಟರಿ ಕಲಾ ವೈಭವ"ವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಪ್ರಭಾಚಂದ್ರ ಜೈನ್, ವಲಯ 4ರ ಸಾಂಸ್ಕೃತಿಕ ಸಂಚಾಲಕ ಮಕ್ಬೂಲ್ ಹುಸೇನ್ ಶುಭ ಹಾರೈಸಿದರು. ಕಾರ್ಯಕ್ರಮ ಸಂಚಾಲಕ ಪ್ರವೀಣ್ ಪಿರೇರಾ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‍ನ ಅಧ್ಯಕ್ಷ ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಹರೀಶ್ ಎಂ.ಕೆ ವಂದಿಸಿದರು. ಧೀರೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ವಲಯ 4ರ 11 ಕ್ಲಬ್‍ಗಳ ಸದಸ್ಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News