ಚೀನಾ ಮತ್ತು ಭಾರತ ತಮ್ಮ ಗುರಿಗಳ ಸಾಧನೆಗಾಗಿ ಪರಸ್ಪರ ನೆರವಾಗಬೇಕು:ಚೀನಾ ರಾಯಭಾರಿ

Update: 2019-10-13 15:08 GMT

ಹೊಸದಿಲ್ಲಿ,ಅ.13: ತಮ್ಮ ಗುರಿಗಳನ್ನು ಸಾಧಿಸಲು ಚೀನಾ ಮತ್ತು ಭಾರತ ಪರಸ್ಪರ ನೆರವಾಗಬೇಕು ಎಂದು ಹೇಳಿರುವ ಭಾರತದಲ್ಲಿ ಚೀನಾದ ರಾಯಭಾರಿ ಸನ್ ವೀಡಾಂಗ್ ಅವರು, ಭಾರತ ಮತ್ತು ಚೀನಾ ಸಹಭಾಗಿತ್ವ ಉಭಯ ರಾಷ್ಟ್ರಗಳಿಗೆ ಇರುವ ಏಕೈಕ ಆಯ್ಕೆಯಾಗಿದೆ ಎಂಬ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಹೇಳಿಕೆಗೆ ಒತ್ತು ನೀಡಿದ್ದಾರೆ.

 ಶನಿವಾರ ಸಮಾರೋಪಗೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿನ್‌ಪಿಂಗ್ ಅವರ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪರಸ್ಪರ ಸಹಕಾರಕ್ಕೆ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.

 ಚೀನಾ ಮತ್ತು ಭಾರತ ಜೊತೆಯಾಗಿ ಕಾರ್ಯಾಚರಿಸುವುದು ಉಭಯ ರಾಷ್ಟ್ರಗಳಿಗಿರುವ ಏಕೈಕ ಆಯ್ಕೆಯಾಗಿದೆ ಎಂದು ಅಧ್ಯಕ್ಷ ಜಿನ್‌ಪಿಂಗ್ ಹೇಳಿದ್ದಾರೆ. ತಮ್ಮ ಗುರಿಗಳನ್ನು ಸಾಧಿಸಲು ಚೀನಾ ಮತ್ತು ಭಾರತ ಪರಸ್ಪರ ನೆರವಾಗಬೇಕು ಎಂದು ಟ್ವೀಟಿಸಿರುವ ವೀಡಾಂಗ್, ಜಿನ್‌ಪಿಂಗ್ ಮತ್ತು ಮೋದಿ ಅವರು ಸ್ನೇಹಮಯ ವಾತಾವರಣದಲ್ಲಿ ಒಟ್ಟಾರೆ,ದೀರ್ಘಾವಧಿಯ ಮತ್ತು ವ್ಯೆಹಾತ್ಮಕ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿದ್ದಾರೆ ಮತ್ತು ಉಭಯ ರಾಷ್ಟ್ರಗಳ ನಡುವೆ ನಿಕಟ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News