ಹೆಜಮಾಡಿ ಬಂದರು ಪ್ರಸ್ತಾವನೆಗೆ ಮರಜೀವ: ಸಚಿವ ಕೋಟ

Update: 2019-10-13 15:39 GMT

ಪಡುಬಿದ್ರಿ, ಅ.13: ಹೆಜಮಾಡಿ ಮೀನುಗಾರಿಕಾ ಬಂದರು ಪ್ರಸ್ತಾವನೆಗೆ ಮರಜೀವ ನೀಡುವ ನಿಟ್ಟಿನಲ್ಲಿ ವಾರದೊಳಗೆ ಅಧಿಕಾರಿಗಳೊಂದಿಗೆ ಬಂದರು ಪ್ರದೇಶಕ್ಕೆ ಭೇಟಿ ನೀಡಲಾಗುವುದು ಎಂದು ರಾಜ್ಯ ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪಡುಬಿದ್ರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಈ ಕುರಿತು ಚರ್ಚೆಯನ್ನು ನಡೆಸಲಾಗಿದೆ. ಈ ಯೋಜನೆಯನ್ನು ನೆನೆಗುದಿಗೆ ಸರಿಸುವ ಚಿಂತನೆ ಇಲ್ಲ. ವಿಧಾನ ಮಂಡಲ ಅಧಿವೇಶನದಿಂದಾಗಿ ಸ್ವಲ್ಪಕಾಲ ವ್ಯತ್ಯಯವಾಗಿದೆ ಎಂದು ತಿಳಿಸಿದರು.

ಈಗಾಗಲೇ ಕೇಂದ್ರ ಸರಕಾರವು ತನ್ನ ಪಾಲಿನ 13.86ಕೋಟಿ ರೂ. ಪ್ರಾಥ ಮಿಕ ಹಂತದಲ್ಲಿ ಬಿಡುಗಡೆಗೊಳಿಸಿದ್ದರೂ ಹಿಂದಿನ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರಗಳ ಅವಧಿಯಲ್ಲೂ ಸಮಾನ ಮೊತ್ತ ಬಿಡುಗಡೆಯಾಗದೆ 138ಕೋಟಿ ರೂ.ಗಳ ವೆಚ್ಚದ ಹೆಜಮಾಡಿ ಬಂದರು ನಿರ್ಮಾಣ ಯೋಜನೆ ನೆನೆಗುದಿೆ ಬಿದ್ದಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News