ಬಂಟ್ವಾಳ: ಕುಸಿದು ಬಿದ್ದು ಮೃತ್ಯು
Update: 2019-10-13 22:00 IST
ಬಂಟ್ವಾಳ : ಪಂಜಿಕಲ್ಲು ಗ್ರಾಮದ ಅಮೈ ನಿವಾಸಿ ಶಿವರಾಮ ಪೂಜಾರಿ (50) ಅವರು ರವಿವಾರ ತಮ್ಮ ಮನೆಯ ಸಮೀಪದ ಗದ್ದೆಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಕಳೆದ ಹಲವು ವರ್ಷಗಳಿಂದ ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಶಿವರಾಮ ಪೂಜಾರಿ ಅವರು ರವಿವಾರ ತಮ್ಮ ಮನೆಯ ಸಮೀಪದ ಗದ್ದೆಗೆ ಕೆಲಸಕ್ಕೆ ಹೋಗಿದ್ದರು. ಆದರೆ ತಾಸು ಕಳೆದರೂ ಹಿಂತಿರುಗಿ ಬಾರದೇ ಇದ್ದುದ್ದನ್ನು ಕಂಡು ಹುಡುಕಾಡಿದಾಗ ಉಳುಮೆ ಮಾಡಿದ ನೀರು ತುಂಬಿದ ಗದ್ದೆಗೆ ಕವುಚಿ ಬಿದ್ದಿದ್ದರು.
ಇವರ ಅಣ್ಣ ಬೊಮ್ಮಯ್ಯ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.