×
Ad

ನೇಪಾಳಕ್ಕೆ 3,490 ಕೋಟಿ ರೂ. ಸಾಲ: ಚೀನಾ ಅಧ್ಯಕ್ಷ ಘೋಷಣೆ

Update: 2019-10-13 23:32 IST

ಕಠ್ಮಂಡು (ನೇಪಾಳ), ಅ. 13: ನೇಪಾಳದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕಾಗಿ ಆ ದೇಶಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಚೀನಾ 5600 ಕೋಟಿ ನೇಪಾಳಿ ರೂಪಾಯಿ (ಸುಮಾರು 3,490 ಕೋಟಿ ಭಾರತೀಯ ರೂಪಾಯಿ) ಸಾಲ ನೀಡುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘೋಷಿಸಿದ್ದಾರೆ.

ಭಾರತ ಪ್ರವಾಸದ ಬಳಿಕ, ಚೀನಾ ಅಧ್ಯಕ್ಷರು ನೇಪಾಳ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ, ರವಿವಾರ ಉಭಯ ದೇಶಗಳು ತಮ್ಮ ನಡುವಿನ ದ್ವಿಪಕ್ಷೀಯ ಬಾಂಧವ್ಯ ಸುಧಾರಿಸಲು 20 ಒಪ್ಪಂದಗಳಿಗೆ ಸಹಿ ಹಾಕಿದವು.

ಎರಡು ದಿನಗಳ ಪ್ರವಾಸಕ್ಕಾಗಿ ಕಠ್ಮಂಡುವಿಗೆ ಶನಿವಾರ ಬಂದ ಜಿನ್‌ಪಿಂಗ್, ಮೊದಲ ದಿನವಾದ ಶನಿವಾರ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಜೊತೆ ಮಾತುಕತೆ ನಡೆಸಿದರು. ಚೀನಾ ಅಧ್ಯಕ್ಷರೊಬ್ಬರು ನೇಪಾಳಕ್ಕೆ ಭೇಟಿ ನೀಡಿರುವುದು 23 ವರ್ಷಗಳಲ್ಲಿ ಇದು ಮೊದಲನೆ ಬಾರಿಯಾಗಿದೆ.

ರವಿವಾರ ಜಿನ್‌ಪಿಂಗ್ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿಯನ್ನು ಭೇಟಿಯಾಗಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News