ಉಡುಪಿ: ಅನರ್ಹ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಕೊನೆ ಅವಕಾಶ
ಉಡುಪಿ, ಅ.14: ಅನರ್ಹ ಕುಟುಂಬಗಳು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ಬಹಳಷ್ಟು ಬಾರಿ ತಿಳುವಳಿಕೆ ಮತ್ತು ಎಚ್ಚರಿಕೆಗಳನ್ನು ನೀಡಿದ್ದರೂ, ಇನ್ನೂ ಬಹಳಷ್ಟು ಅನರ್ಹ ಕುಟುಂಬಗಳು ಅಂದರೆ ಆದಾಯ ತೆರಿಗೆ ಪಾವತಿಸುತ್ತಿರುವವರು, ಸರಕಾರಿ, ಅರೆ ಸರಕಾರಿ, ನಿಗಮ, ಮಂಡಳಿ, ಸಹಕಾರ ಸಂಘಗಳ ನೌಕರರುಗಳು ವಾರ್ಷಿಕ 1,20,000 ಕ್ಕಿಂತ ಹೆಚ್ಚಿನ ವರಮಾನ ಹೊಂದಿರುವವರು, 4 ಚಕ್ರ ವಾಹನಗಳನ್ನು ಸ್ವಂತಕ್ಕಾಗಿ ಹೊಂದಿರುವವರು, ಪಟ್ಟಣ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ವಾಸದ ಮನೆ ಹೊಂದಿರುವವರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಎಲ್ಲಾ ಮಾಹಿತಿಗಳನ್ನು ಇಲಾಖೆ ಪತ್ತೆ ಹಚ್ಚಿದ ನಂತರ ಅನರ್ಹ ಕಾರ್ಡುದಾರರಿಗೆ ವಿಧಿಸಬಹುದಾದ ದಂಡ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅ.31ರ ಒಳಗೆ ಅನರ್ಹ ಬಿಪಿಎಲ್ ಕಾರ್ಡುದಾರರು ಸ್ವ-ಇಚ್ಛೆ ಯಿಂದ ಬಿಪಿಎಲ್ ಪಡಿತರ ಚೀಟಿಗಳನ್ನು ಸಮೀಪದ ಆಹಾರ ಇಲಾಖೆ ಕಚೇರಿಗೆ ನೀಡಿ ಎಪಿಎಲ್ ಪಡಿತರ ಚೀಟಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.