ವೈಜ್ಞಾನಿಕ ಕೃಷಿ ಲಾಭದಾಯಕ: ಉದಯಕುಮಾರ್ ಶೆಟ್ಟಿ

Update: 2019-10-14 14:19 GMT

ಬ್ರಹ್ಮಾವರ, ಅ.14: ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಲಾಭದಾಯಕವಲ್ಲ ಎಂದು ಕೃಷಿಯಿಂದ ದೂರ ಹೋಗಬಾರದು. ಹಿಂದೆಲ್ಲಾ ಏನೇನೂ ಸೌಲ್ಯ ಗಳಿಲ್ಲದಿದ್ದರೂ ಹಿರಿಯರು ಉತ್ತಮವಾಗಿ ಕೃಷಿ ಮಾಡುತಿದ್ದರು. ಈಗ ಎಲ್ಲ ಸವಲತ್ತುಗಳಿದ್ದರೂ ಕೃಷಿ ಮಾಡುವ ಮನಸ್ಸುಗಳು ಕಡಿಮೆಯಾಗುತ್ತಿವೆ. ಸಂಘಟಿತರಾಗಿ, ವೈಜ್ಞಾನಿಕ ಕ್ರಮಗಳಿಂದ ಕೃಷಿ ಮಾಡಿದರೆ ನಷ್ಟದ ಮಾತು ಖಂಡಿತ ಇಲ್ಲ ಎಂದು ಪ್ರಗತಿಪರ ಕೃಷಿಕ ಉದಯಕುಮಾರ್ ಶೆಟ್ಟಿ ಬೇರಂಬೈಲು ಹೇಳಿದ್ದಾರೆ.

ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ ಮತ್ತು ಕೃಷಿಕ ಸಂಘ ಚೇರ್ಕಾಡಿ ಗ್ರಾಮ ಸಮಿತಿ ಚೇರ್ಕಾಡಿಯ ಬಾಯರ್‌ಬೆಟ್ಟಿನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಭತ್ತ ಕೃಷಿ ಮಾಹಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ ಮತ್ತು ಕೃಷಿಕ ಸಂಘ ಚೇರ್ಕಾಡಿ ಗ್ರಾಮ ಸಮಿತಿ ಚೇರ್ಕಾಡಿಯ ಬಾಯರ್‌ಬೆಟ್ಟಿನಲ್ಲಿ ಆಯೋಜಿಸಿದ್ದ ವೈಜ್ಞಾನಿಕ ತ್ತಕೃಷಿಮಾಹಿತಿಸೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜಿಲ್ಲಾ ಕೃಷಿಕ ಸಂಘ ಚೇರ್ಕಾಡಿ ಗ್ರಾಮ ಸಮಿತಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಾಯರ್‌ಬೆಟ್ಟು ಗೋಪಾಲಕೃಷ್ಣ ಭಟ್ ಭಾಗವಹಿಸಿದ್ದರು.

ರಾಷ್ಟ್ರದ ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಮತ್ತು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ ಮತ್ತು ಲಾಭದಾಯಕವಾಗಿ ಭತ್ತ ಮತ್ತು ತೆಂಗು ಕೃಷಿ ಮಾಡುವ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

 ಬಾಲಕೃಷ್ಣ ಶೆಟ್ಟಿ ಚೇರ್ಕಾಡಿ, ರತ್ನಾಕರ ಮಾಸ್ತರ್ ಬಾಯ್ರಾಬೆಟ್ಟು, ರಾಜೀವ ಶೆಟ್ಟಿಗಾರ್, ಗುಣವತಿ, ಶಾಂತಾ, ಶ್ಯಾಮರಾಯ ಆಚಾರಿ, ಸತ್ಯನಾರಾಯಣ ಭಟ್ ಆರೂರು, ಉಮಾಶಂಕರ್ ಶೆಟ್ಟಿ ಮುದೂರು, ರತ್ನಾಕರ ಮಾಸ್ತರ್ ಹೆಬ್ಬಾರಬೆಟ್ಟು, ಪ್ರಶಾಂತ್ ನಾಯಕ್ ಕಂಗಿನತೋಟ ಮೊದಲಾದವರು ಉಪಸ್ಥಿತರಿದ್ದರು.

ಕೃಷಿಕ ಸಂಘ ಗ್ರಾಮ ಸಮಿತಿಯ ಬಾಬುರಾಯ ಆಚಾರ್ಯ ಪ್ರಸ್ತಾವನೆಗೈದರು. ಮಾಲತಿ ಬಾಯ್ರಾಬೆಟ್ಟು ಸ್ವಾಗತಿಸಿದರು. ರವೀಂದ್ರ ಗುಜ್ಜರ ಬೆಟ್ಟು ಸಂಘಟನೆ ಮಹತ್ವದ ಬಗ್ಗೆ ಮಾತನಾಡಿದರು. ಕಸ್ತೂರಿ ವಿ. ಪ್ರು ಕಾರ್ಯಕ್ರಮ ನಿರೂಪಿಸಿ, ನಾಗರಾಜ ನಾಯ್ಕೆ ಮುಳ್ಳುಗುಡ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News