ಅ.25: ‘ಅಬ್ಬಗಾಯಿಟ್ಟ್ ಒರು ನಾಲ್’ ಕಾರ್ಯಕ್ರಮ

Update: 2019-10-14 14:24 GMT

ಮಂಗಳೂರು, ಅ.14: ಕುಟುಂಬದ ಸದಸ್ಯರೆಲ್ಲಾ ಸೇರಿಕೊಂಡು ತಮ್ಮ ತಂದೆಯನ್ನು ಅಭಿನಂದಿಸುವ ವಿಶಿಷ್ಟ ಕಾರ್ಯಕ್ರಮ ‘ಅಬ್ಬಗಾಯಿಟ್ಟ್ ಒರು ನಾಲ್’ನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅ.25ರ ಅಪರಾಹ್ನ 3 ಗಂಟೆಗೆ ಟ್ಯಾಲೆಂಟ್ ಸಭಾಂಗಣದಲ್ಲಿ ಆಯೋಜಿಸಿದೆ.

ಇದರಲ್ಲಿ 25 ಕುಟುಂಬಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಈಗಾಗಲೆ ಹಲವರು ಹೆಸರು ನೋಂದಾಯಿಸಿದ್ದು, ಆಸಕ್ತರು ದೂ.ಸಂ: 0824-4267883/9901628758ನ್ನು ಸಂಪರ್ಕಿಸಬಹುದು. ತಂದೆಯ ತ್ಯಾಗವನ್ನು ತಮ್ಮ ಮಕ್ಕಳಿಗೆ ತಿಳಿಸಿ ತಂದೆಯನ್ನು ಅಭಿನಂದಿಸುವ ಮೂಲಕ ಕುಟುಂಬ ಬಂಧವನ್ನು ಮತ್ತಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ಕಾರ್ಯಕ್ರಮದ ಸಂಘಟಕ ಮುಹಮ್ಮದ್ ಯುಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News