ಶಕ್ತಿನಗರ: ಪೊಲೀಸ್ ಆಯುಕ್ತರಿಂದ ‘ಬೀಟ್’ ಕಾರ್ಯಾಚರಣೆ

Update: 2019-10-14 14:29 GMT

ಮಂಗಳೂರು, ಅ.14: ಜನಸ್ನೇಹಿ ‘ಬೀಟ್’ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಸೋಮವಾರ ಸಂಜೆ ಶಕ್ತಿನಗರದಲ್ಲಿ ಬೀಟ್‌ಪೊಲೀಸರೊಂದಿಗೆ ರಸ್ತೆಯುದ್ದಕ್ಕೂ ಹೆಜ್ಜೆ ಹಾಕಿ ಜನಸಾಮಾನ್ಯರ ಅಹವಾಲು ಆಲಿಸಿದರು.

ಈ ಸಂದರ್ಭ ಪೊಲೀಸ್ ವಸತಿ ಗೃಹದ ಆಸುಪಾಸು ತ್ಯಾಜ್ಯಗಳ ರಾಶಿಯನ್ನು ಕಂಡ ಆಯುಕ್ತರು ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಸ್ವಚ್ಛತೆಯ ಬಗ್ಗೆ ‘ಕ್ಲಾಸ್’ ತೆಗೆದುಕೊಂಡರು.

‘ಬೀಟ್’ ವೀಕ್ಷಣೆಯ ವೇಳೆ ನೂತನ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿದ ಆಯುಕ್ತರಿಗೆ ಪೊಲೀಸ್ ಕುಟುಂಬಸ್ಥರು ಅಂದರೆ ಪೊಲೀಸರ ಹೆಂಡತಿ, ಮಕ್ಕಳು, ಸಹೋದರಿಯರು ತ್ಯಾಜ್ಯದ ಬಗ್ಗೆ ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ವಾರಕ್ಕೊಮ್ಮೆ ಶ್ರಮದಾನದ ಮೂಲಕವಾದರೂ ವಸತಿಗೃಹದ ಸುತ್ತಮುತ್ತದ ಸ್ವಚ್ಛವಾಗಿಡಿ. ಯಾರೋ ಬಂದು ಮಾಡುತ್ತಾರೆ ಎಂದು ಕಾದು ಕುಳಿತುಬಿಡಬೇಡಿ. ದೇಶದ ಪ್ರಧಾನಿಯೇ ಸ್ವಚ್ಛತೆಗಾಗಿ ಸ್ವತ: ರಸ್ತೆಗಿಳಿದಿರುವಾಗ ನೀವು ಸುಮ್ಮನೆ ಕೂರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News