ಪಾದುವ ಥಿಯೇಟರ್ ಹಬ್‌ನಲ್ಲಿ ‘ದ್ವೀಪ’ ನಾಟಕದ ಪ್ರದರ್ಶನ

Update: 2019-10-14 14:38 GMT

ಮಂಗಳೂರು, ಅ.14: ರಂಗಭೂಮಿಯ ನಿರಂತರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಂಗಳೂರಿನ ಹಲವು ಹವ್ಯಾಸಿ ರಂಗತಂಡಗಳು ಜೊತೆ ಸೇರಿ ಆರಂಭಗೊಂಡ ಪಾದುವ ಥಿಯೇಟರ್ ಹಬ್ ವಾರಾಂತ್ಯ ನಾಟಕ ಪ್ರದರ್ಶನದಲ್ಲಿ ಲಕ್ಷ್ಮಣ್ ಕೆಪಿ ನಿರ್ದೇಶನದ, ಆಯನ ನಾಟಕ ಮನೆಯ ಕಲಾವಿದರು ಅಭಿನಯಿಸಿದ ಕನ್ನಡ ನಾಟಕ ‘ದ್ವೀಪ’ವು ಪಾದುವ ಕಾಲೇಜಿನ ಬಯಲು ರಂಗಮಂದಿರದ ಆವರಣದಲ್ಲಿ ರವಿವಾರ ಪ್ರದರ್ಶನಗೊಂಡಿತು.

ಇದು ಈ ನಾಟಕದ ಎರಡನೇ ಪ್ರದರ್ಶನವಾಗಿತ್ತು. ಈ ರಂಗಪ್ರದರ್ಶನಕ್ಕೆ ತುಳು ರಂಗಭೂಮಿ ಕಲಾವಿದ ವಿಜಯಕುಮಾರ್ ಕೊಡಿಯಾಲಬೈಲ್ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಆಯನ ನಾಟಕ ಮನೆಯ ಮೋಹನ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

ರಂಗಪ್ರದರ್ಶನವನ್ನು ರಂಗವೇದಿಕೆಯಲ್ಲಿ ಪ್ರದರ್ಶಿಸದೆ ಬಯಲು ರಂಗಮಂದಿರದ ಒಂದು ಭಾಗದಲ್ಲಿ ವಿನೂತನವಾಗಿ ಪ್ರದರ್ಶಿಸಲಾಯಿತು. ನಾಟಕದ ಬಳಿಕ ಪ್ರೇಕ್ಷಕರ ಜೊತೆ ಸಂವಾದ ನಡೆಸಲಾಯಿತು. ನಾಟಕದ ತಾಂತ್ರಿಕತೆಯಲ್ಲಿ ಆಹಾರ್ಯಂ ಸಂಸ್ಥೆ ಸಹಕಾರ ನೀಡಿತ್ತು. ಅ.19ರಂದು ಈ ಬಯಲು ರಂಗಮಂದಿರದಲ್ಲಿ ನಂದಗೋಕುಲ ಕಲಾವಿದರು ಅಭಿನಯಿಸುವ ಪು.ತಿ.ನ. ವಿರಚಿತ, ಶ್ವೇರಾ ಅರೆಹೊಳೆ ನಿರ್ದೇಶನದ ‘ಗೋಕುಲ ನಿರ್ಗಮನ’ ನೃತ್ಯ ನಾಟಕದ ಪ್ರದರ್ಶನವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News