ತುಳಸೀ ಸಂಕೀರ್ತನೆ ಅಪೂರ್ವ ಕಲೆ: ಪಲಿಮಾರುಶ್ರೀ

Update: 2019-10-14 15:01 GMT

ಉಡುಪಿ: ತುಳು ಶಿವಳ್ಳಿ ಮಾಧ್ವ ಮಹಾ ಮಂಡಲ ಉಡುಪಿ ಇವರು ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಮಧ್ವಮಂಟಪದಲ್ಲಿ ಒಂದು ವಾರ ಆಯೋಜಿಸಿರುವ ತುಳಸೀ ಸಂಕೀರ್ತನೆ ಸಪ್ತಾಹ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿ ಮನೆಯ ಎದುರು ತುಳಸೀ ಕಟ್ಟೆ ಇದ್ದರೆ ಅದರಿಂದ ಆರೋಗ್ಯ ಪ್ರಾಪ್ತಿ ಯಾಗುತ್ತದೆ. ಇಂಥ ವಿಶಿಷ್ಟ ಗುಣ ತುಳಸಿ ಗಿಡಕ್ಕಿದೆ. ಬಹು ಮಹಡಿ ಕಟ್ಟಡಗಳಲ್ಲಿ ತುಳಸೀ ಕಟ್ಟೆ ನಿರ್ಮಾಣ ಮಾಡಿದರೆ ತುಶಿಮಾಮ ಸದಸ್ಯರು ಬಂದು ಸಂಕೀರ್ತನಾ ಸೇವೆ ನಡೆಸಿಕೊಡಲಿದ್ದಾರೆ. ಸ್ಪರ್ಧೆಯಲ್ಲಿ ಕೃಷ್ಣ-ಮುಖ್ಯಪ್ರಾಣ ದೇವರ ಅನುಗ್ರಹವೇ ಬಹುಮಾನ ಎಂದು ಸ್ಪರ್ಧಾಳುಗಳು ಭಾವಿಸಬೇಕು ಎಂದು ಪಲಿಮಾರುಶ್ರೀ ಹೇಳಿದರು.

ಪಲಿಮಾರು ಮಠದ ಕಿರಿಯ ಯತಿಗಳಾಜದ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಹಿರಿಯ ಸಾಹಿತಿ ಎ.ವಿ. ನಾವಡ, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅದ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷ ಸಂಸ್ಥೆ ಮುಖ್ಯಸ್ಥ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಪತಿ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಕೃಷ್ಣರಾಜ ಸರಳಾಯ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ, ಕರ್ಣಾಟಕ ಬ್ಯಾಂಕ್ ಎಜಿಎಂ ಗೋಪಾಲಕೃಷ್ಣ ಸಾಮಗ, ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಭಟ್ ಉಪಸ್ಥಿತರಿದ್ದರು.

ತುಳಸೀ ಸಂಕೀರ್ತನಾ ಸ್ಪರ್ಧೆ ಇಂದಿನಿಂದ ಅ.20ರವರೆಗೆ ಪ್ರತಿದಿನ ಸಂಜೆ 4 ರಿಂದ 7 ರವರೆಗೆ ಮಧ್ವಮಂಟಪದಲ್ಲಿ ನಡೆಯಲಿದೆ. ಪುರುಷ, ಮಹಿಳೆ ಹಾಗೂ ಮಕ್ಕಳ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಒಟ್ಟು 25 ತಂಡಗಳು ಭಾಗವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News