ವಿಟ್ಲ : ಅಕ್ರಮ ಜಾನುವಾರು ಸಾಗಾಟ ಆರೋಪಿ; ವಾಹನ ವಶಕ್ಕೆ

Update: 2019-10-14 15:06 GMT

ವಿಟ್ಲ, ಅ. 14: ದನಗಳ ಅಕ್ರಮ ಸಾಗಾಟ ಆರೋಪದ ಮೇರೆಗೆ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಚನಿಲ ಎಂಬಲ್ಲಿ ಸೋಮವಾರ ನಡೆದಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಡಪದವು ಕಡೆಯಿಂದ ಸಾಲೆತ್ತೂರು ರಸ್ತೆ ಮೂಲಕ ಕೇರಳ ಕಡೆಗೆ ವಾಹನವೊಂದರಲ್ಲಿ ಎರಡು ದನ ಹಾಗೂ ಒಂದು ಹೋರಿಯನ್ನು ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದರು.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News