ನೀರು-ನೈರ್ಮಲ್ಯ, ಸಂರಕ್ಷಣಾ ತರಬೇತಿ ಕಾರ್ಯಾಗಾರ

Update: 2019-10-14 15:38 GMT

ಕಾಪು, ಅ.14: ವ್ಯಕ್ತಿಗತ ಚಿಂತನೆಯು ಸಮೂಹಕ್ಕೆ ನಂತರ ಸಮುದಾಯಕ್ಕೆ ವರ್ಗಾವಣೆಗೊಂಡಾಗ ಸ್ವಸ್ಥ ಸಮಾಜ ನಿರ್ಮಾಣಗೊಂಡು ಪರಿಸರ ಸಂರಕ್ಷಣೆ ಯಂತಹ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ ಎಂದು ಪ್ರೇರಣಾ ಸಾಂಸ್ಕತಿಕ ಪ್ರತಿಷ್ಠಾನದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಕಟಪಾಡಿ ಹೇಳಿದ್ದಾರೆ.

ಪ್ರೇರಣಾ ಸಾಂಸ್ಕತಿಕ ಪ್ರತಿಷ್ಠಾನವು ಬೆಂಗಳೂರಿನ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗಾಗಿ ರವಿವಾರ ಕಟಪಾಡಿ ಯಲ್ಲಿ ಆಯೋಜಿಸಿದ ನೀರು- ನೈರ್ಮಲ್ಯ ಮತ್ತು ಸಂರಕ್ಷಣೆಯ ಕುರಿತ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಟಪಾಡಿ ರೋಟರಿ ಅಧ್ಯಕ್ಷ ಉಮೇಶ್ ರಾವ್, ಕಟಪಾಡಿ ಹಾಲು ಉತ್ಪಾ ದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ರಾವ್ ಕಟಪಾಡಿ, ಪ್ರೇರಣಾ ಸಾಂಸ್ಕತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉಡುಪಿ, ನವೋದಯ ಸ್ವಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕ ಹರಿನಾಥ್, ತಾಲೂಕು ಸಂಘಟಕ ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್ ಉಪಸ್ಥಿತರಿದ್ದರು.

ಪ್ರೇರಣಾ ಸಾಂಸ್ಕತಿಕ ಪ್ರತಿಷ್ಠಾನದ ಕೋಶಾಧಿಕಾರಿ ಅಶೋಕ್ ಕೋಟ್ಯಾನ್ ಸ್ವಾಗತಿಸಿದರು. ನಿರ್ದೇಶಕ ರಾಘವೇಂದ್ರ ರಾವ್ ವಂದಿಸಿದರು. ಕಾರ್ಯ ದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು. ಸುಮಾರು 160ಕ್ಕಿಂತಲೂ ಅಧಿಕ ಮಹಿಳೆಯರಿಗೆ ಬೆಂಗಳೂರಿನ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್ ನೀರಿನ ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News