ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿಯ ಕೊರತೆ ನೀಗಿಸಿ: ಡಾ.ಪವನಜ

Update: 2019-10-14 15:45 GMT

ಉಡುಪಿ, ಅ.14: ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿಯ ಕೊರತೆಯನ್ನು ನೀಗಿಸುವ ಮೂಲಕ ಕನ್ನಡ ಬಳಕೆಯನ್ನು ಉತ್ತೇಜಿಸುವ ಕಾಯಕದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಮಾಹಿತಿ ತಂತ್ರಜ್ಞ ಡಾ.ಯು.ಬಿ. ಪವನಜ ಹೇಳಿದ್ದಾರೆ.

ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಕರಾವಳಿ ವಿಕಿಮೀಡಿಯನ್ಸ್ ಮತ್ತು ವಿಕಿವಿಮೆನ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಅ.12ರಂದು ಕಾಲೇಜಿನಲ್ಲಿ ಆಯೋಜಿಸಲಾದ ವಿಕಿಪೀಡಿಯ ಸಂಪಾದನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿ ವಿಕಿವಿಮೆನ್ ಮಂಗಳೂರು ಇದರ ಸಂಸ್ಥಾಪಕಿ ಧನಲಕ್ಷ್ಮಿ ಕೆ.ಟಿ. ಮಾತನಾಡಿ, ಮಹಿಳೆಯರು ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜ್ಞಾನಾರ್ಜನೆಯೊಂದಿಗೆ ಜ್ಞಾನದ ಸೃಷ್ಠಿಕರ್ತರೂ ಆಗಬಹುದು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿದ್ದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ರಾಮಚಂದ್ರ ಅಡಿಗ ಜಿ. ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಸೋಜನ್ ಕೆ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕಿವಿಮೆನ್ ಮಂಗಳೂರು ಸದಸ್ಯೆ ಅರ್ಪಿತಾ ಹೆಗ್ಡೆ ಕಾಯರ್ಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News