ಅಲೆವೂರು ಗ್ರಾಪಂ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Update: 2019-10-14 15:47 GMT

 ಉಡುಪಿ, ಅ.14: ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಅಲೆವೂರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡಕ್ಕೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲಾಜಿ ಆರ್. ಮೆಂಡನ್, ಈಗಾಗಲೇ ಸುಮಾರು 150 ಕೋಟಿಗೂ ಹೆಚ್ಚು ಅನುದಾನ ಅಲೆವೂರಿಗೆ ನೀಡಲು ಪ್ರಸ್ತಾವನೆ ನೀಡಿದ್ದು, ಸದ್ಯದಲ್ಲಿಯೇ ಮಂಜೂರಾ ಬಹುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸುಮಾರು 60ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಇತರ ಸೌಲಭ್ಯ ವಿತರಿಸಲಾಯಿತು. ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಚತೆಯ ಬಗ್ಗೆ ಪ್ರಮಾಣವಚನ ಬೋಧಿಸಿ ಬಟ್ಟೆ ಚೀಲ ವಿತರಣೆ ಮಾಡಲಾಯಿತು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಗ್ರಾಪಂ ಅಧ್ಯಕ್ಷ ಶ್ರೀಕಾಂತ್, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿದರು. ತಾಪಂ ಸದಸ್ಯೆ ಬೇಬಿ ರಾಜೇಶ್, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ ಹಂಸರಾಜ್, ಸದಸ್ಯರಾದ ಹರೀಶ್ ಸೇರಿಗಾರ್, ಸುರೇಶ್ ಬಂಗೇರ, ಶಶಿಕಲಾ ಶೆಟ್ಟಿ, ಪ್ರಶಾಂತ ಆಚಾರ್ಯ, ಸೌಮ್ಯ ನಾಯಕ್, ಮಾಜಿ ಉಪಾಧ್ಯಕ್ಷ ಅಶೋಕ್ ಕುಮಾರ್, ಪಡು ಅಲೆವೂರು ದೇವಸ್ಥಾನದ ಲಕ್ಷ್ಮೀರಮಣ ಉಪಾಧ್ಯ, ಗ್ರಾಮ ಕರಣಿಕ ಕರಿಯಮ್ಮ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆಣ್ಣೂರು ಪ್ರಮಾಣ ವಚನ ಬೋಧಿಸಿದರು. ಗ್ರಾಪಂ ಸದಸ್ಯ ಶೇಖರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News