ಮಂಗಳೂರು: ಪೊಲೀಸ್ ಬೀಟ್‌ನಲ್ಲಿ ಕಮಿಷನರ್‌ರಿಂದ ದೂರು ಆಲಿಕೆ

Update: 2019-10-14 15:56 GMT

ಮಂಗಳೂರು, ಅ.14: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂಖ್ಯೆ 20ರ ಶಕ್ತಿನಗರದಲ್ಲಿ ಸೋಮವಾರ ಪೊಲೀಸ್ ಆಯುಕ್ತ ಡಾ. ಹರ್ಷ ಪಿಎಸ್ ನಡೆಸಿ ಹಲವರ ದೂರುಗಳನ್ನು ಆಲಿಸಿದರು. ಕಂಕನಾಡಿ ಠಾಣೆಯ ಎಚ್‌ಸಿ ಸಿ.ಎಂ. ಮದನ್ ಜೊತೆಯಲ್ಲಿ ಬೀಟ್ ಕರ್ತವ್ಯ ನಿರ್ವಹಿಸಿದ ವೇಳೆ ಶಕ್ತಿನಗರದ ಮಂಜುನಾಥ ಎಂಬವರ ಪುತ್ರಿ ಆಶಾಲತಾ ಎಂಬಾಕೆ ತಮ್ಮ ಮನೆಯ ಮೇಲೆ ತೆಂಗಿನಕಾಯಿ ಬಿದ್ದು ತೊಂದರೆಯಾಗುವ ಬಗ್ಗೆ ದೂರಿಕೊಂಡರು.

ಶಕ್ತಿನಗರದ ಧರ್ಮರಾಜ್ ಎಂಬವರ ಪಾಸ್‌ಪೋರ್ಟ್ ಅರ್ಜಿಯನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಶಿಫಾರಸು ಮಾಡಲಾಯಿತು. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಎರಡು ಪ್ರಕರಣದ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು.

ಆಶಾಕಿರಣ ಯೋಜನೆಯ ಅನ್ವಯ ರೌಡಿಶೀಟರ್ ಗಣೇಶ ಎಂಬಾತನ ಪತ್ನಿ ಕಾವೇರಿ ನೀಡಿದ ಕೌಶಲ್ಯ ತರಬೇತಿ ಕುರಿತು ನೀಡಿದ ಅರ್ಜಿಯನ್ನು ಸ್ವೀಕರಿಸಲಾಯಿತು. ಬೀಟ್ ವ್ಯಾಪ್ತಿಯ ರೌಡಿಶೀಟರ್‌ಗಳಾದ ಕಾರ್ತಿಕ್ ನೀತಿ ನಗರ, ಪ್ರಥ್ವಿರಾಜ್ ನೀತಿ ನಗರ, ಅಭಿಷೇಕ್ ಮಣಿಯವರನ್ನು ಭೇಟಿ ಮಾಡಿ ಮುಖ್ಯವಾಹಿನಿಯಲ್ಲಿ ಬರುವಂತೆ ಸಲಹೆ ನೀಡಿದರು. ಈ ಸಂದರ್ಭ ಬೀಟ್ ಸದಸ್ಯರು, ಸ್ಥಳಿಯ ಆಟೊರಿಕ್ಷಾ ಚಾಲಕರು, ಸಾರ್ವಜನಿಕರು, ಅಂಗಡಿ ಮುಂಗ್ಗಟ್ಟುಗಳ ಮಾಲಕರನ್ನು ಕಮಿಷನರ್ ಮಾತನಾಡಿಸಿದರು.

ಶಕ್ತಿನಗರದ ಪೊಲೀಸ್ ಕ್ವಾರ್ಟರ್ಸ್‌ಗೆ ಭೇಟಿ ನೀಡಿ ಎಸ್ಸೈಗಳಾದ ಸುಕುಮಾರನ್ ಮತ್ತು ಸುದೀಪ್‌ಗೆ ನೂತನವಾಗಿ ನಿರ್ಮಿಸಿದ ವಸತಿ ಗೃಹಗಳನ್ನು ಮಂಜೂರು ಮಾಡಿ ಸ್ಥಳದಲ್ಲಿಯೇ ಆದೇಶಪತ್ರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News