ದ.ಕ.ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ

Update: 2019-10-14 15:57 GMT

ಮಂಗಳೂರು, ಅ.14: ದ.ಕ.ಜಿಲ್ಲೆಯ ಮಂಗಳೂರು ನಗರ ಸಹಿತ ಹಲವು ಕಡೆ ಸೋಮವಾರ ರಾತ್ರಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆಯಾಗಿದೆ. ರವಿವಾರ ರಾತ್ರಿಯೂ ಕೆಲವು ಕಡೆ ಉತ್ತಮ ಮಳೆಯಾಗಿತ್ತು.

ಸೋಮವಾರ ಹಗಲು ಮೋಡ ಕವಿದ ಮತ್ತು ಬಿಸಿಲಿನ ವಾತಾವರಣವಿತ್ತು. ಆದರೆ ರಾತ್ರಿ 8:30ರಿಂದ ಬಿರುಸಿನ ಮಳೆಯಾಗಿದೆ. ಕರಾವಳಿಯ ಹಲವು ಕಡೆ ಕಳೆದ ಮೂರ್ನಾಲ್ಕು ದಿನದಿಂದ ಹಗಲು ಬಿಸಿಲು ಮತ್ತು ರಾತ್ರಿ ಮಳೆಯ ಕಣ್ಣುಮುಚ್ಚಾಲೆಯಾಟವಿತ್ತು. ಹಗಲು ಬಿಸಿಲು ಮತ್ತು ರಾತ್ರಿ ಮಳೆಯ ವಾತಾವರಣವು ಇನ್ನೂ ಮೂರ್ನಾಲ್ಕು ದಿನ ಕರಾವಳಿಯಲ್ಲಿರಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News