ಟರ್ಕಿ ಗಡಿಯಲ್ಲಿ ಸೇನೆ ನಿಯೋಜನೆಗೆ ಸಿರಿಯ ಜೊತೆ ಒಪ್ಪಂದ: ಕುರ್ದ್ ಬಂಡುಕೋರರ ಘೋಷಣೆ

Update: 2019-10-14 17:47 GMT

ಬೈರೂತ್ (ಲೆಬನಾನ್), ಅ. 14: ಟರ್ಕಿಯ ಸೇನೆಯನ್ನು ಎದುರಿಸುವುದಕ್ಕಾಗಿ ಟರ್ಕಿ ಗಡಿ ಸಮೀಪ ಸಿರಿಯದ ಸೇನೆಯನ್ನು ನಿಯೋಜಿಸುವ ಸಂಬಂಧ ಸಿರಿಯ ಸರಕಾರದೊಂದಿಗೆ ಒಪ್ಪಂದವೊಂದಕ್ಕೆ ಬರಲಾಗಿದೆ ಎಂದು ಉತ್ತರ ಸಿರಿಯದಲ್ಲಿರುವ ಕುರ್ದ್ ಬಂಡುಕೋರರು ರವಿವಾರ ಘೋಷಿಸಿದ್ದಾರೆ.

‘‘ಟರ್ಕಿಯ ಆಕ್ರಮಣವನ್ನು ತಡೆಯಲು ಮತ್ತು ಎದುರಿಸಲು ಸಿರಿಯ ಸರಕಾರದೊಂದಿಗೆ ಒಪ್ಪಂದಕ್ಕೆ ಬರಲಾಗಿದೆ. ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್)ಗೆ ನೆರವಾಗಲು ಸಿರಿಯ-ಟರ್ಕಿ ಗಡಿಯುದ್ದಕ್ಕೂ ಸಿರಿಯ ಸೇನೆಯನ್ನು ನಿಯೋಜಿಸಲಾಗುವುದು’’ ಎಂದು ಕುರ್ದಿಶ್ ಆಡಳಿತವು ತನ್ನ ಫೇಸ್‌ಬುಕ್ ಪುಟದಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದೆ.

ಟರ್ಕಿ ಆಕ್ರಮಣವನ್ನು ಎದುರಿಸಲು ಸಿರಿಯ ಸೇನೆಯು ಉತ್ತರಕ್ಕೆ ಸೈನಿಕರನ್ನು ಕಳುಹಿಸುತ್ತಿದೆ ಎಂದು ಇದಕ್ಕೂ ಮೊದಲು ಸಿರಿಯದ ಸರಕಾರಿ ಸುದ್ದಿ ಸಂಸ್ಥೆ ‘ಸನಾ’ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News